ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಅಪ್ಪ- ಅಮ್ಮ ನನ್ನನ್ನು ಕ್ಷಮಿಸಿ ಬಿಡಿ'- ಪತ್ನಿ ಬೆನ್ನಲ್ಲೇ ಡೆತ್‌ನೋಟ್ ಬರೆದಿಟ್ಟು ಪತಿ ಆತ್ಮಹತ್ಯೆ

ಹೈದರಾಬಾದ್: ಪತ್ನಿಯ ಬೆನ್ನಲ್ಲೇ ಪತಿಯೂ ಆತ್ಮಹತ್ಯೆಗೆ ಶರಣಾದ ಘಟನೆ ತೆಲಂಗಾಣದ ಸೂರ್ಯಪೇಟ್‌ನಲ್ಲಿ ನಡೆದಿದೆ.

ಪೆದ್ದಪಂಗ ಪ್ರಣಯ್ ಹಾಗೂ ಲಾವಣ್ಯ (21) ಆತ್ಮಹತ್ಯೆಗೆ ಶರಣಾದ ದಂಪತಿ.ಪ್ರಣಯ್ ಕೃಷಿ ಇಲಾಖೆಯಲ್ಲಿ ಎಒ ಆಗಿ ಕೆಲಸ ಮಾಡುತ್ತಿದ್ದ. ಇತ್ತ ಲಾವಣ್ಯ ಸೂರ್ಯಪೇಟ್‌ನಲ್ಲಿ ಪಶು ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ವರದಕ್ಷಿಣೆ ಕಿರುಕುಳ ತಾಳಲಾರದೆ ಲಾವಣ್ಯ ಭಾನುವಾರ ವಿಷ ಸೇವಿಸಿದ್ದಾರೆ. ಕೂಡಲೇ ಲಾವಣ್ಯಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೂಡ ನೀಡಲಾಗುತ್ತಿತ್ತು. ಈ ಮಧ್ಯೆ ಅವರು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಪ್ರಣಯ್ ಕೂಡ ಆತ್ಮಹತ್ಯೆಗೆ ಶರಣಾಗಿದೆ.

ಡೆತ್ ನೋಡ್ ಬರೆದಿರುವ ಪ್ರಣಯ್ ''ನಾನು ಈ ಜಗತ್ತಿನಿಂದಲೇ ದೂರ ಹೋಗುತ್ತಿದ್ದೇನೆ. ಅಪ್ಪ- ಅಮ್ಮ ನನ್ನನ್ನು ಕ್ಷಮಿಸಿ ಬಿಡಿ. ಅಲ್ಲದೆ ಲಾವಣ್ಯ ಇಲ್ಲದೆ ನನಗೆ ಬದುಕಲು ಇಷ್ಟವಿಲ್ಲ. ನನ್ನ ಪತ್ನಿಯ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಮನವಿ ಕೂಡ ಮಾಡಿಕೊಂಡಿದ್ದಾನೆ.

Edited By : Vijay Kumar
PublicNext

PublicNext

04/01/2021 04:45 pm

Cinque Terre

56.93 K

Cinque Terre

5

ಸಂಬಂಧಿತ ಸುದ್ದಿ