ನವದೆಹಲಿ: ಕೊಟ್ಟ ಸಾಲ ವಾಪಸ್ ಕೊಡಲಿಲ್ಲ ಎಂಬ ಕಾರಣಕ್ಕೆ ಸ್ನೇಹಿತನನ್ನೇ ಕೊಲೆ ಮಾಡಲಾಗಿದೆ. ಅಷ್ಟೇ ಅಲ್ಲ. ಶವವನ್ನು ಸ್ಕೂಟಿ ಮೇಲೆ ಅಡ್ಡಲಾಗಿ ಇಟ್ಟು ಊರೆಲ್ಲ ಸುತ್ತಾಡಿದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.
ನವದೆಹಲಿಯ ರೋಹಿಣಿ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಂಕಿತ್ (24) ಎಂಬ ಯುವಕನೇ ಕೊಲೆಗೈದ ಆರೋಪಿ ಎನ್ನಲಾಗಿದೆ. ಕೊಲೆ ಮಾಡಿದ ನಂತರ ಶವವನ್ನು ಎಲ್ಲಿ ಬಿಸಾಕಬೇಕೆಂದು ತಿಳಿಯದೇ ಊರೆಲ್ಲಾ ಸುತ್ತಿದ್ದಾನೆ. ನಂತರ ಖಾಲಿ ಜಮೀನಿನಲ್ಲಿ ಶವ ಬಿಸಾಕಿ ಹೋಗಿದ್ದಾನೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.
ಮೃತ ದೇಹದಿಂದ ಕಾಣುತ್ತಿದ್ದ ರಕ್ತದ ಕಲೆಗಳನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ತಿಳಿಸಿದ್ದಾರೆ. ಈ ಎಲ್ಲ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದೇ ದೃಶ್ಯಾವಳಿಯ ಅಧಾರವಾಗಿ ತನಿಖೆ ನಡೆಸಿದ ಪೊಲೀಸರಿಗೆ ಶವ ದೊರೆತಿದೆ.
PublicNext
01/01/2021 09:04 pm