ಜಕಾರ್ತಾ(ಇಂಡೋನೇಷ್ಯಾ): ಇಡೀ ಪ್ರಪಂಚದ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಕೊರೊನಾ ವೈರಸ್ ವಿರುದ್ಧ ಹೋರಾಡುವ ತರಾತುರಿಯಲ್ಲಿದ್ದಾರೆ. ಆದರೆ ಇಲ್ಲೊಬ್ಬ ನರ್ಸ್ ಕೋವಿಡ್ ಸೋಂಕಿತ ವ್ಯಕ್ತಿಯೊಬ್ಬನೊಂದಿಗೆ ಪ್ರತ್ಯೇಕ ವಾರ್ಡ್ ನಲ್ಲಿಯೇ ಸಲಿಂಗಿ ಸೆಕ್ಸ್ ಮಾಡಿದ್ದಾನೆ..!
ಈ ಘಟನೆ ನಡೆದದ್ದು ಇಂಡೋನೇಷಿಯಾದ ಜಕಾರ್ತಾ ಆಸ್ಪತ್ರೆಯಲ್ಲಿ. ಕೊರೊನಾ ರೋಗಿಗಳಿಗಾಗಿ ಮಾಡಲಾಗಿರುವ ಪ್ರತ್ಯೇಕ ವಾರ್ಡಿನ ಶೌಚಾಲಯದಲ್ಲಿ ಸೋಂಕಿಯ ವ್ಯಕ್ತಿಯನ್ನು ಕರೆದೊಯ್ದ ನರ್ಸ್ ಅಲ್ಲಿಯೇ ಪಿಪಿಈ ಕಿಟ್ ಕಳಚಿಟ್ಟು ಮಾಡಬಾರದ್ದನ್ನು ಮಾಡಿದ್ದಾರೆ.
ಇದಕ್ಕೂ ಮುಂಚೆ ಇವರಿಬ್ಬರೂ ವಾಟ್ಸ್ಆ್ಯಪ್ ನಲ್ಲಿ ನಡೆಸಿದ ಗುಪ್ತಾಂಗ ಕುರಿತಾದ ಚರ್ಚೆಯ ಚಾಟ್ ಸ್ಕ್ರೀನ್ ಶಾಟ್ ಹಾಗೂ ಶೌಚಾಲಯದಲ್ಲಿ ಮಲಗಿದ್ದ ಫೋಟೋಗಳನ್ನು ಸೋಂಕಿತ ವ್ಯಕ್ತಿ ಶೇರ್ ಮಾಡಿದ್ದಾರೆ. ಹೀಗಾಗಿ ಈ ವಿಷಯ ಬೆಳಕಿಗೆ ಬಂದಿದೆ.
ನಂತರ ಶುಶ್ರೂಷಕನನ್ನು ಪರೀಕ್ಷೆಗೆ ಒಳಪಡಿಸಿದಾಗ ಆತನಿಗೆ ಕೊರೊನಾ ನೆಗೆಟಿವ್ ವರದಿ ಬಂದಿದೆ. ಸ್ಥಳೀಯ ಪೊಲೀಸರು ರೋಗಿಯ ಪತ್ತೆ ಮಾಡಿ ಇಬ್ಬರನ್ನೂ ಬಂಧಿಸಿದ್ದಾರೆ. ಪೊಲೀಸರ ಮುಂದೆ ಇಬ್ಬರೂ ತಪ್ಪೊಪ್ಪಿಕೊಂಡಿದ್ದಾರೆ.
PublicNext
31/12/2020 03:10 pm