ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಿಳೆಯ ಹೈಡ್ರಾಮಕ್ಕೆ ಪೊಲೀಸರು ತಬ್ಬಿಬ್ಬು; ವಾಕಿ-ಟಾಕಿ ಕಸಿದು, ಪೇದೆಯನ್ನೇ ನೂಕಿ ರಂಪಾಟ

ಹೈದರಾಬಾದ್​: ಸಂಚಾರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಕಾರನ್ನು ಲಾಕ್​ ಮಾಡಿದ್ದಕ್ಕೆ, ಆಕ್ರೋಶಗೊಂಡ ಮಹಿಳೆಯೊಬ್ಬರು ಟ್ರಾಫಿಕ್​ ಪೊಲೀಸರ ವಿರುದ್ಧ ಕಿರುಚಾಡಿ, ಸ್ಥಳದಲ್ಲೇ ಹೈಡ್ರಾಮ ಮಾಡಿರುವ ಘಟನೆ ಬುಧವಾರ ಹೈದರಾಬಾದ್​ನಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೋಠಿ ಪ್ರದೇಶದ ಸುಲ್ತಾನ್​ ಬಜಾರ್​ನ ಜನನಿಬಿಡ ಪ್ರದೇಶದಲ್ಲಿರುವ ನೋ ಪಾರ್ಕಿಂಗ್​ ವಲಯದಲ್ಲಿ ಪಾರ್ಕ್​ ಮಾಡಿದ್ದ ಕಾರನ್ನು ಹೈದರಾಬಾದ್​ ಟ್ರಾಫಿಕ್​ ಪೊಲೀಸರು ಸೀಜ್​ ಮಾಡಿದರು. ಟ್ರಾಫಿಕ್​ ತೆರವುಗೊಳಿಸುವ ಕಾರ್ಯಾಚರಣೆಯ ಭಾಗವಾಗಿ ನೋ ಪಾರ್ಕಿಂಗ್​ ಜಾಗದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಪೊಲೀಸ್​ ಸಿಬ್ಬಂದಿ ಟೋಯಿಂಗ್​ ಮಾಡುತ್ತಿದ್ದರು.

ಈ ವೇಳೆ ಕಾರೊಂದರ ಚಕ್ರಗಳನ್ನು ಟೋಯಿಂಗ್​ ಮಾಡಲು ಮುಂದಾದಾಗ ಕಾರನ್ನೇಕೆ ಸೀಜ್​ ಮಾಡುತ್ತೀರಾ? ಎಂದು ಕರ್ತವ್ಯ ನಿರತ ಪೊಲೀಸ್​ ಸಿಬ್ಬಂದಿಯ ಮೇಲೆಯೇ ಮಹಿಳೆ ಕೂಗಾಡಿದಳು. ಅಲ್ಲದೆ, ಮಿತಿ ಮೀರಿ ವರ್ತಿಸಿದ ಮಹಿಳೆ ಒಂದು ಹಂತದಲ್ಲಿ ಪೊಲೀಸ್​ ಸಿಬ್ಬಂದಿಯೊಬ್ಬರ ವಾಕಿ-ಟಾಕಿಯನ್ನು ಕಸಿದುಕೊಂಡು, ಅವರನ್ನು ನೂಕಿದರು. ಅವಾಚ್ಯ ಪದಗಳಿಂದ ನಿಂದಿಸುತ್ತಾ ಸ್ಥಳದಲ್ಲೇ ಭಾರೀ ಹೈಡ್ರಾಮವನ್ನು ಸೃಷ್ಟಿಸಿದರು.

ಮಹಿಳೆಯ ಕೂಗಾಟವನ್ನು ನೋಡಿ ಪೊಲೀಸರು ತಬ್ಬಿಬ್ಬಾದರು. ಆದರೆ, ಮಹಿಳೆಯ ಕಿರುಚಾಟಕ್ಕೆ ಕ್ಯಾರೆ ಎನ್ನದ ಪೊಲೀಸರು ಕಾರನ್ನು ನೋ ಪಾರ್ಕಿಂಗ್​ನಲ್ಲಿ ಪಾರ್ಕ್​ ಮಾಡಿದ್ದಕ್ಕೆ ದಂಡ ವಿಧಿಸಿದರು ಮತ್ತು ಕರ್ತವ್ಯನಿರತ ಪೊಲೀಸರ ಜೊತೆ ಅನುಚಿತವಾಗಿ ವರ್ತಿಸಿದ್ದಕ್ಕೆ ಪ್ರಕರಣವನ್ನು ದಾಖಲಿಸಿದ್ದಾರೆ.

Edited By : Abhishek Kamoji
PublicNext

PublicNext

23/09/2022 03:15 pm

Cinque Terre

117.85 K

Cinque Terre

25

ಸಂಬಂಧಿತ ಸುದ್ದಿ