ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಚಲಿಸುತ್ತಿರುವ ರೈಲಿನ‌ ಮುಂದೆ ಪತ್ನಿಯನ್ನು ಎತ್ತಿ ಎಸೆದ ಭಂಡ ಗಂಡ

ಮುಂಬೈ: ಮಲಗಿದ್ದ ಪತ್ನಿಯನ್ನ ಎಬ್ಬಿಸಿದ ಪತಿ ಚಲಿಸುತ್ತಿರುವ ರೈಲಿನ ಮುಂದೆ ಬಿಸಾಕಿದ್ದಾನೆ‌. ಈ ಭಯಾನಕ ಘಟನೆ ಮಹರಾಷ್ಟ್ರದ ವಸಾಹಿ ರೈಲು ನಿಲ್ದಾಣದಲ್ಲಿ ನಡೆದಿದೆ.

ರೈಲು ಬರುತ್ತಿರೋದನ್ನು ಗಮನಿಸಿದ ಭಂಡ ಗಂಡ ಈ ಪಾಪದ ಕೃತ್ಯ ಎಸಗಿದ್ದಾನೆ. ಮಲಗಿದ್ದ‌ ಪತ್ನಿಯನ್ನು ಎಬ್ಬಿಸಿ ಒಮ್ಮಿಂದೊಮ್ಮೆಲೇ ರೈಲಿನ ಮುಂದೆ ಎಳೆದು ಬಿಸಾಕಿದ್ದಾ‌ನೆ. ನಂತರ ಮಲಗಿದ್ದ ಮಕ್ಕಳನ್ನು ಎಬ್ಬಿಸಿ ಅಲ್ಲಿಂದ ಕರೆದುಕೊಂಡು ಜಾಗ ಖಾಲಿ ಮಾಡಿದ್ದಾನೆ‌.

ರೈಲಿನ ಮುಂದೆ ತಳ್ಳಲ್ಪಟ್ಟ ಪತ್ನಿ ಮೃತಪಟ್ಟಿದ್ದಾಳೆ ಎಂಬ ಮಾಹಿತಿ ಇದೆ. ಈ ಕಿರಾತಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆತ ಯಾರು? ಎಲ್ಲಿಯವನು ಎಂಬ ಬಗ್ಗೆ ರೈಲ್ವೇ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Edited By : Nagaraj Tulugeri
PublicNext

PublicNext

24/08/2022 09:40 am

Cinque Terre

65.69 K

Cinque Terre

2

ಸಂಬಂಧಿತ ಸುದ್ದಿ