ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯೋಗಿ ನಾಡಿನಲ್ಲಿ ನಿಲ್ಲದ ಅಟ್ಟಹಾಸ-ಪ್ರಭಾವಿ ಏಟಿಗೆ ಸತ್ತೆ ಹೋದ ಶ್ರೀ ಸಾಮಾನ್ಯ !

ಉತ್ತರ ಪ್ರದೇಶ:ಇದು ತಾಲಿಬಾನ್ ಅಲ್ಲವೇ ಅಲ್ಲ. ಭಾರತ ದೇಶದಲ್ಲಿಯೇ ನಡೆದ ಒಂದು ಕ್ರೂರ ಘಟನೆ. ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿಯೇ ನಡೆದಿದೆ. ಪ್ರಭಾವಿಯ ಹೊಡೆತಕ್ಕೆ ಆ ಸಣಕಲು ಸತ್ತೇ ಹೋಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವೀಡಿಯೋ ಈಗ ಅತಿ ಹೆಚ್ಚು ಗಮನ ಸೆಳೆಯುತ್ತಿದೆ.

ಈ ವ್ಯಕ್ತಿಯನ್ನ ಮನಸೋಯಿಚ್ಛೆ ಹೊಡೆದಿರೋ ವ್ಯಕ್ತಿ ಬೇರೆ ಯಾರೋ ಅಲ್ಲ. ಇಲ್ಲಿಯ ಪ್ರಭಾವಿ ವ್ಯಕ್ತಿ

ಪುರುಷೋತ್ತಮ ತ್ರಿವೇದಿ ಫ್ಯಾಮಿಲಿಯ ವ್ಯಕ್ತಿ ರಾಜ್ ದ್ವಿವೇದಿ ಅಂತಲೇ ಹೇಳಲಾಗುತ್ತಿದೆ.

ಏಟು ತಿಂದವನ ಹೆಸರು ಶುಭಂ ಗುಪ್ತಾ ಅಂತಲೇ ಹೇಳಾಗುತ್ತಿದೆ. ಬಿದ್ದ ಏಟಿಗೆ ಈ ಶುಭಂ ಸತ್ತೇ ಹೋಗಿದ್ದಾನೆ. ಅಮಾನುಷ್ಯವಾಗಿಯೇ ಹೊಡೆದಿರೋ ರಾಜ್ ದ್ವಿವೇದಿ ವಿರುದ್ಧ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಲೇಬೇಕು ಅಂತಲೇ ಆಗ್ರಹಿಸಲಾಗಿದೆ.

ಸಮಾಜವಾದಿ ಪಕ್ಷದ ರಾಮ್ ಕರಣ್ ನಿರ್ಮಲ್ ಈ ವೀಡಿಯೋವನ್ನ ಹಂಚಿಕೊಂಡು ಕ್ರೂರಿಯ ವಿರುದ್ಧ ಕ್ರಮ ಜರುಗಿಸಲೇಬೇಕು ಅಂತಲೇ ಟ್ವಿಟರ್ ನಲ್ಲಿ ಬರೆದಿಕೊಂಡಿದ್ದಾರೆ. ಆದರೆ, ಹೊಡೆದಿರೋದಕ್ಕೆ ಕಾರಣ ಏನೂ ಅನ್ನೋದೇ ತಿಳಿದು ಬಂದಿಲ್ಲ.

Edited By :
PublicNext

PublicNext

16/04/2022 05:36 pm

Cinque Terre

114.24 K

Cinque Terre

52

ಸಂಬಂಧಿತ ಸುದ್ದಿ