ಉತ್ತರ ಪ್ರದೇಶ - ಮದುವೆಯ ದಿನ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ ನವದಂಪತಿ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿರುವ ಘಟನೆ ಉತ್ತರಪ್ರದೇಶದ ಘಾಝಿಯಾಬಾದ್‌ನಲ್ಲಿ ನಡೆದಿದೆ. ವಧುವರರಿಬ್ಬರು ಗಾಳಿಯಲ್ಲಿ ಗುಂಡು ಹಾರಿಸಿದ ವೀಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಮದುವೆಯಲ್ಲಿ ಭಾಗಿಯಾಗಿದ್ದವರೊಬ್ಬರು ಅಪ್‌ಲೋಡ್ ಮಾಡಿದ್ರು.. ಈ ವೀಡಿಯೋ ವೈರಲ್ ಆಗ್ತಿದ್ದಂತೆ ಪೊಲೀಸರ ಗಮನಕ್ಕೂ ಬಂದಿದ್ದು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಇದೀಗ ಮದುವೆಯ ಸಂಭ್ರಮದಲ್ಲಿದ್ದ ನವದಂಪತಿ ಪೊಲೀಸರ ತನಿಖೆ ಎದುರಿಸಬೇಕಾಗಿದೆ. ಉತ್ತರ ಭಾರತದ ಕೆಲವು ಕಡೆಗಳಲ್ಲಿ ಮದುವೆಯ ದಿನದಂದು ಸಂಭ್ರಮಾಚರಣೆಯ ಪ್ರಯುಕ್ತ ಗಾಳಿಯಲ್ಲಿ ಗುಂಡು ಹಾರಿಸ್ತಾರೆ. ಆದ್ರೆ ಇದು ಕಾನೂನಿಗೆ ವಿರುದ್ಧವಾಗಿದ್ದು, ಅನೇಕ ಸಾವುನೋವುಗಳಾಗಿರುವ ಉದಾಹರಣೆಯೂ ಇವೆ.
PublicNext
15/12/2021 03:31 pm