ಕೋಲ್ಕತ್ತಾ: ಪತ್ನಿಗಾಗಿ ಯುವಕನೊಬ್ಬ ಅತ್ತೆ-ಮಾವನ ಮನೆಯ ಮುಂದೆ ಧರಣಿ ಕುಳಿತ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ನಡೆದಿದೆ.
28 ವರ್ಷದ ಅಲೋಕ್ ಮಲ್ಲಿಕ್ ಸೋಮವಾರ ಬೆಳಗ್ಗೆಯಿಂದ ಅತ್ತೆ-ಮಾವನ ಮನೆಯ ಹೊರಗೆ ಪತ್ನಿಗಾಗಿ ಧರಣಿ ಕುಳಿತಿದ್ದಾರೆ. ಅಲೋಕ್ ತಾನು ಪ್ರೀತಿಸಿದ ಹುಡುಗಿ ಸಂಗೀತಾ ಘೋಷ್‌ಗೆ 18 ವರ್ಷ ತುಂಬಿದ ನಂತರ ಇತ್ತೀಚೆಗೆ ವಿವಾಹವಾಗಿದ್ದರು. ಸಂಗೀತಾ ತನ್ನ ಕುಟುಂಬದ ವಿರೋಧದ ನಡುವೆಯೂ ಅಲೋಕ್ ಜೊತೆಗೆ ವಿವಾಹವಾಗಿದ್ದಳು. ಅಲೋಕ್ ಫೋಟೋಗ್ರಾಫ್ ಸ್ಟುಡಿಯೋ ಇಟ್ಟುಕೊಂಡಿದ್ದನು. ಇವರ ವಿವಾಹವು ದೇವಾಲಯವೊಂದರಲ್ಲಿ ಹಿಂದೂ ಆಚರಣೆಗಳ ಪ್ರಕಾರ ನಡೆದಿದೆ. ಅದನ್ನು ಕಾನೂನುಬದ್ಧವಾಗಿ ನೋಂದಾಯಿಸಲಾಗಿದೆ.
ಇತ್ತೀಚೆಗೆ ಸಂಗೀತಾ ತನ್ನ ಪೋಷಕರನ್ನು ನೋಡಲು ಸೋನಾಖಾಲಿ ಗ್ರಾಮದಲ್ಲಿರುವ ಮನೆಗೆ ಹೋಗಿದ್ದಳು. ಆದರೆ ಆಕೆಯ ಕುಟುಂಬವು ಮತ್ತೆ ಸಂಗೀತಾಳನ್ನು ವಾಪಸ್ ಪತಿಯ ಮನೆಗೆ ಹೋಗಲು ಬಿಡುತ್ತಿಲ್ಲ. ಹೀಗಾಗಿ ನನ್ನ ಪತ್ನಿಯನ್ನು ಕಳುಹಿಸಬೇಕು. ನನ್ನ ಪತ್ನಿಯನ್ನು ಪೋಷಕರು ಅಪರಿಚಿತ ಸ್ಥಳಕ್ಕೆ ಕಳುಹಿಸುತ್ತಿದ್ದಂತೆ ಧರಣಿ ಕುಳಿತುಕೊಂಡೆ. ಅವರು ನನ್ನ ಪತ್ನಿಯನ್ನ ಮನೆಗೆ ವಾಪಸ್ ಕಳುಹಿಸುವರೆಗೂ ಧರಣಿಯನ್ನು ಮುಂದುವರಿಸುತ್ತೇನೆ ಎಂದು ಅಲೋಕ್ ಹೇಳಿದ್ದಾರೆ.
PublicNext
28/09/2020 04:56 pm