ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

16 ಯೂಟ್ಯೂಬ್ ಚ್ಯಾನೆಲ್ ಗಳು ಬ್ಯಾನ್

ನವದೆಹಲಿ: ಭಾರತದ 10, ಪಾಕಿಸ್ತಾನದ 6 ಯೂಟ್ಯೂಬ್ ಚ್ಯಾನೆಲ್ ಗಳನ್ನು ಮಾಹಿತಿ ಹಾಗೂ ಪ್ರಸಾರ ಇಲಾಖೆ ಬ್ಯಾನ್ ಮಾಡಿದೆ.

ಹೌದು ಭಾರತ ದೇಶದ ಬಗ್ಗೆ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುತ್ತಿದ್ದ 16 ಯೂಟ್ಯೂಬ್ ಚ್ಯಾನೆಲ್ ಗಳನ್ನು ಸೋಮವಾರ ಬ್ಯಾನ್ ಮಾಡಿದೆ. ಭಾರತ ಬ್ಯಾನ್ ಮಾಡಿರುವ 16 ಯೂಟ್ಯೂಬ್ ಚ್ಯಾನೆಲ್ ಗಳ ಪೈಕಿ 10 ಭಾರತದ ಹಾಗೂ 6 ಪಾಕಿಸ್ತಾನದ ಚ್ಯಾನೆಲ್ ಗಳು ಸೇರಿವೆ.

ಯೂಟ್ಯೂಬ್ ಚ್ಯಾನೆಲ್ಗಳ ನಿಷೇಧದ ಬಗ್ಗೆ ಪತ್ರಿಕಾ ಮಾಹಿತಿ ಬ್ಯೂರೋ(ಪಿಬಿಐ), ರಾಷ್ಟ್ರೀಯ ಭದ್ರತೆ, ಭಾರತದ ವಿದೇಶಿ ಸಂಬಂಧಗಳು, ದೇಶದ ಕೋಮು ಸೌಹಾರ್ದತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳ ಕುರಿತು ಸುಳ್ಳು ಸುದ್ದಿಗಳನ್ನು ಹರಡಲು ಈ ಚ್ಯಾನೆಲ್ಗಳನ್ನು ಬಳಸಲಾಗಿತ್ತು ಎಂದಿದೆ.

ಬ್ಯಾನ್ ಆಗಿರುವ ಭಾರತೀಯ ಮೂಲದ ಯೂಟ್ಯೂಬ್ ಚ್ಯಾನೆಲ್ ಗಳು ಭಯೋತ್ಪಾದನೆ, ಧಾರ್ಮಿಕ ಸಮುದಾಯಗಳ ನಡುವೆ ದ್ವೇಷ, ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಕೆಲಸಕ್ಕೆ ಕೈ ಹಾಕಿದೆ. ಪರಿಶೀಲಿಸಲಾದ ಕೆಲವು ಸುದ್ದಿಗಳು ಸಮಾಜದ ವಿವಿಧ ವರ್ಗಗಳನ್ನು ಭಯಭೀತಗೊಳಿಸುವ ಸಾಮರ್ಥ್ಯ ಹೊಂದಿವೆ ಎಂದು ಕೇಂದ್ರ ತಿಳಿಸಿದೆ.

Edited By : Nirmala Aralikatti
PublicNext

PublicNext

26/04/2022 07:59 am

Cinque Terre

121.03 K

Cinque Terre

21

ಸಂಬಂಧಿತ ಸುದ್ದಿ