ದಾವಣಗೆರೆ: ಜಿಲ್ಲೆಯ ಅವರಗೊಳ್ಳ ರೇಣುಕಾಶ್ರಮದ ಓಂಕಾರ ಶಿವಾಚಾರ್ಯ ಸ್ವಾಮಿಗಳ ವಿರುದ್ಧ ಅಕ್ರಮ ಸಂಬಂಧ ಆರೋಪ ಕೇಳಿಬಂದಿದೆ. ಈ ಮೂಲಕ ರಾಜ್ಯದ ಮತ್ತೊಬ್ಬ ಮಠಾಧೀಶರು ವಿವಾದದ ಸುಳಿಗೆ ಸಿಲುಕಿದ್ದಾರೆ.
ಓಂಕಾರ ಶಿವಾಚಾರ್ಯ ಶ್ರೀಗಳ ವಿರುದ್ಧದ ಆರೋಪ ಏನು..? ಚಂದ್ರಶೇಖರ್ ಎಂಬುವವರು, ತಮ್ಮ ಪತ್ನಿಯನ್ನ ಓಂಕಾರ ಶಿವಾಚಾರ್ಯರ ಶ್ರೀಗಳು ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ನಾನು ಮತ್ತು ನನ್ನ ಮನೆಯವರು ಮೂರು ವರ್ಷಗಳ ಕಾಲ ಪ್ರೀತಿ ಮಾಡಿದ್ವಿ. ಬಳಿಕ ಮದುವೆ ಮಾಡಿಕೊಂಡು 4 ವರ್ಷಗಳ ಕಾಲ ತುಂಬಾ ಚೆನ್ನಾಗಿಯೇ ಇದ್ವಿ. ಐದು ವರ್ಷಗಳ ಬಳಿಕ, ನನ್ನ ಪತ್ನಿ ಮಕ್ಕಳು ಆಗಿಲ್ಲ ಎಂದು ಆಗಾಗ ದಾವಣಗೆರೆಯಲ್ಲಿರುವ ಇವರ ಮಠಕ್ಕೆ ಹೋಗಲು ಶುರುಮಾಡಿದ್ದಳು.
ಮಕ್ಕಳಾಗಿಲ್ಲ ಎಂಬ ವಿಚಾರಕ್ಕೆ ಆಗಾಗ ಜಗಳ ಆಗುತ್ತಿದ್ದ ಹಿನ್ನೆಲೆ ನಾನು ಆಕೆ ಮಠಕ್ಕೆ ಹೋಗುವುದನ್ನು ವಿರೋಧ ಮಾಡಲಿಲ್ಲ. ನಂತರದ ದಿನಗಳಲ್ಲಿ ಆಕೆ ಮಠಕ್ಕೆ 15 ದಿನಕ್ಕೆ ಒಮ್ಮೆ ಹೋಗಲು ಶುರು ಮಾಡಿದ್ದಳು. ಆದರೂ ನಾನು ಸುಮ್ಮನಿದ್ದೆ. ಒಂದು ದಿನ ನನ್ನ ಹೆಂಡತಿ ಹಾಗೂ ಅವರ ಅಮ್ಮ ಬಂದು, ಶಿವಮೊಗ್ಗದಲ್ಲಿ ಇರೋದು ಬೇಡ. ದಾವಣಗೆರೆಯಲ್ಲೇ ಸೆಟಲ್ ಆಗಿಬಿಡಿ. ನಾವು ನಿಮಗೆ ಮನೆ ಮಾಡಿ ಕೊಡ್ತೇವೆ ಎಂದು ನಂಬಿಸಿದರು.
ಅದಕ್ಕೆ ನಾನು ಒಪ್ಪಿದೆ.
ನಂತರ ಈ ಸ್ವಾಮೀಜಿಯ ಒತ್ತಾಯದ ಮೇರೆಗೆ ನನ್ನ ಹೆಂಡತಿ ಮಠದಲ್ಲಿ ಸೇವೆ ಮಾಡಲು ಒಪ್ಪಿಕೊಳ್ತಾಳೆ. ಅದರಂತೆ ಅವರ ಇನ್ನೊಂದು ಮಠವಾದ ಕಲ್ಲುಬಂಡೆ ಮಠದಲ್ಲಿ ನಮ್ಮನ್ನ ಪೂಜೆ ಮಾಡಲು ನೇಮಿಸುತ್ತಾರೆ. ನಾನು ಕೂಡ ಪೂಜೆ ಮಾಡಲು ಮಂತ್ರವನ್ನ ಕಲಿತುಕೊಂಡೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ನನ್ನಾಕೆ ಸ್ವಾಮೀಜಿ ಜೊತೆ ಚೆನ್ನಾಗಿಯೇ ಇದ್ದಳು.
ಒಂದು ದಿನ ಮಠದಲ್ಲಿ ರೇಣುಕಾ ಜಯಂತಿ ನಡೆಯುತ್ತಿತ್ತು. ಆಗ ಸ್ವಾಮೀಜಿಯ ಅಸಲಿ ಬಣ್ಣವನ್ನ ನಾನು ಕಣ್ಣಾರೆ ಕಂಡೆ. ಆ ದಿನ ರಾತ್ರಿ ಸ್ವಾಮೀಜಿ ರೂಮಿಗೆ ಹೋಗಿದ್ದ ನನ್ನ ಹೆಂಡತಿ ಎಷ್ಟೋ ಹೊತ್ತಿನ ಬಳಿಕ ಬಂದಿದ್ದಾಳೆ. ಅದನ್ನ ಪ್ರಶ್ನಿಸಿದಾಗ ಆಕೆ ಬೆವರಲು ಆರಂಭಿಸಿದ್ದಳು. ಇದರಿಂದ ನನಗೆ ಡೌಟ್ ಬಂದಿತ್ತು. ವಿಚಾರಿಸಿದಾಗ ಸ್ವಾಮೀಜಿಗೆ ಕಾಲು ನೋವಿದ್ದರಿಂದ ಒತ್ತುತ್ತಿದ್ದೆ ಎಂದಿದ್ದಾಳೆ.
ಕೊನೆಗೆ ಒಂದಿನ ಈ ವಿಚಾರ ಎಲ್ಲರಿಗೂ ಗೊತ್ತಾದಾಗ ನನ್ನ ಹೆಂಡತಿಯನ್ನ ಮಠದಿಂದ ಬಿಡಿಸಲು ಪ್ರಯತ್ನಿಸಿದೆ. ಆದರೆ ಈ ವಿಚಾರ ಎಲ್ಲರಿಗೂ ಗೊತ್ತಾದರೆ ನಾನು ಸಾಯುತ್ತೇನೆ ಎಂದು ಹೆದರಿಸಿದ್ದಾಳೆ. ಆದರೆ ಕಳೆದ ಒಂದೂವರೆ ವರ್ಷಗಳಿಂದ ನನ್ನ ಪತ್ನಿಯನ್ನ ಸ್ವಾಮೀಜಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಸ್ವಾಮೀಜಿ ಜೊತೆಗಿನ ಚಂದ್ರಶೇಖರ್ ಸಂಭಾಷಣೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಒಂದೂವರೆ ವರ್ಷ ನನ್ನ ಹೆಂಡ್ತಿಯನ್ನ ಯೂಸ್ ಮಾಡ್ಕೊಂಡ್ರಿ. ಅಜ್ಜರೇ, ಈಗ ನನಗೆ ಅವಳನ್ನ ಮರೆಯೋಕೆ ಆಗ್ತಿಲ್ಲ. ನಾನು ಎಲ್ಲಾ ವಿಡಿಯೋನೂ ಮಾಡ್ಕೊಂಡಿದ್ದೀನಿ. ಕೆಟ್ಟದ್ದು ಆಗ್ಬಾರ್ದು ಅಂದ್ರೆ ಹೆಂಡತಿಯನ್ನ ನನ್ನ ಹತ್ತಿರ ಕಳಿಸಿ ಎಂದು ಮನವಿ ಮಾಡಿಕೊಂಡಿರುವ ಆಡಿಯೋ ಇದೀಗ ವೈರಲ್ ಆಗಿದೆ.
PublicNext
10/09/2022 04:21 pm