ನವದೆಹಲಿ: ರಾಜಸ್ಥಾನದ ಉದಯಪುರದಲ್ಲಿ ನಡೆದ ದರ್ಜಿ ಕನ್ಹಯ್ಯಲಾಲ್ ಕೊಲೆಯನ್ನು ನವದೆಹಲಿ ಜಮಾ ಮಸೀದಿ ಮುಖ್ಯಸ್ಥ ಅಹಮದ್ ಭುಕಾರಿ ತೀವ್ರವಾಗಿ ಖಂಡಿಸಿದ್ದಾರೆ.
ವಿಡಿಯೋ ಮೂಲಕ ತಮ್ಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕನ್ಹಯ್ಯಲಾಲ್ ಕೊಲೆ ಅತ್ಯಂತ ಅಮಾನವೀಯ. ಕೊಲೆ ಪಾತಕರು ಮೃಗೀಯ ವರ್ತನೆ ತೋರಿದ್ದಾರೆ. ಇದು ಮನುಷ್ಯತ್ವ ವಿರೋಧಿ ಹಾಗೂ ಧರ್ಮ ವಿರೋಧಿ ಕೃತ್ಯ ಎಂದಿರುವ ಅವರು, ಕೊಲೆಗೈದವರಿಗೆ ಉಗ್ರ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದ್ದಾರೆ.
PublicNext
30/06/2022 02:22 pm