ಕಠ್ಮಂಡು: ಕಳೆದ ಶುಕ್ರವಾರ ಬಾಬಾ ರಾಮ್‌ದೇವ್ ಒಡೆತನದ ಎರಡು ಟಿವಿ ವಾಹಿನಿಗಳು ನೇಪಾಳದಲ್ಲೂ ಪ್ರಸಾರ ಸೇವೆ ಆರಂಭಿಸಿವೆ. ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವುಬ ಹಾಗೂ ಕಮ್ಯುನಿಸ್ಟ್ ಪಕ್ಷದ ನಾಯಕ ಪುಷ್ಪಕಮಲ್ ದಹಲ್ ಅವರು ಈ ಚಾನೆಲ್‌ಗಳನ್ನು ಲೋಕಾರ್ಪಣೆ ಮಾಡಿದ್ದರು.
ಆದರೆ ಇದಕ್ಕೆ ಅಗತ್ಯವಿರುವ ಅನುಮತಿಯನ್ನು ಬಾಬಾ ರಾಮ್‌ದೇವ್ ಅವರು ಪಡೆದಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ನೇಪಾಳದ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಪ್ರಧಾನ ನಿರ್ದೇಶಕ ಗೋಗಾನ್ ಬಹದ್ದೂರ್ ಹಮಲ್ ಈ ಬಗ್ಗೆ ಮಾತನಾಡಿದ್ದು, ಈ ಎರಡೂ ಚಾನಲ್‌ಗಳ ನೋಂದಣಿ ಪ್ರಕ್ರಿಯೆಗೆ ನಮಗೆ ಮನವಿ ಬಂದಿಲ್ಲ. ಪ್ರಸಾರ ಪ್ರಾರಂಭಿಸುವುದಕ್ಕೆ ಅಗತ್ಯವಿರುವ ಕಾನೂನು ಪ್ರಕ್ರಿಯೆಗಳನ್ನೂ ಪೂರ್ಣಗೊಳಿಸಿಲ್ಲ. ಕಾನೂನು ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಚಾನೆಲ್‌ಗಳ ಮೇಲೆ ಕಾನೂನು ಕ್ರಮ ಜರುಗಿಸಲಿದ್ದೇವೆ ಎಂದು ಹೇಳಿದ್ದಾರೆ.
PublicNext
22/11/2021 06:07 pm