ದೇಶಕ್ಕೆ ಮಾದರಿಯಾದ ಚಿತ್ರದುರ್ಗದ ಮುರುಘಾಮಠದ ಶ್ರೀಗಳ ವಿರುದ್ಧ ಕೇಳಿ ಬಂದಿರುವ ಗಂಭೀರ ಆರೋಪ ಈಗ ಇಡೀ ಕೋಟ್ಯಾಂತರ ಭಕ್ತ ಸಮುದಾಯವನ್ನೇ ತಲ್ಲಣಗೊಳಿಸಿದೆ.
ಚಿತ್ರದುರ್ಗ ಬೃಹನ್ಮಠದ ಪೀಠಾಧಿಪತಿಗಳಾದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಮಠದ ಸಂಸ್ಥೆಯ ಶಾಲೆಯ ಅಪ್ರಾಪ್ತ ವಯಸ್ಸಿನ ಬಾಲಕಿಯರು ಮಾಡಿರುವ ಲೈಂಗಿಕ ದೌರ್ಜನ್ಯದ ಆರೋಪ ಈಗ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ. ಆದರೆ ಅಥಣಿ ಗಚ್ಚಿನ ಮಠವು ಚಿತ್ರದುರ್ಗ ಶಾಖಾಮಠವಾಗಿದ್ದರಿಂದ ಇಲ್ಲಿನ ಭಕ್ತರಿಗೆ ಶ್ರೀಗಳ ಮೇಲಿನ ಆರೋಪದಿಂದ ಆದಷ್ಟು ಬೇಗನೆ ಮುಕ್ತರಾಗಲಿ ಎಂದು ಹಾರೈಸುತ್ತಿದ್ದಾರೆ.
ಅಷ್ಟಕ್ಕೂ ಶ್ರೀಗಳು ಮುರುಘಾಮಠದ ಶಾಖಾ ಮಠಗಳಲ್ಲೊಂದಾದ ಬೆಳಗಾವಿಯ ಅಥಣಿಯ ಗಚ್ಚಿನ ಮಠದೊಂದಿಗೆ ಮುರುಘಾ ಶರಣರು ವಿಶೇಷ ನಂಟು ಹಾಗೂ ಅವಿನಾಭಾವ ಸಂಬಂಧವನ್ನು ಹೊಂದಿದ್ದಾರೆ. ಶ್ರೀಗಳ ಮೇಲಿನ ಈ ಆರೋಪ ಅಥಣಿ ತಾಲೂಕಿನಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿದ್ದು ಭಕ್ತರಲ್ಲೂ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಅತ್ಯಂತ ಸಾತ್ವಿಕ,ಸಂವೇದನಾಶೀಲ ಹಾಗೂ ಸ್ಥಿತ ಪ್ರಜ್ಞರಾಗಿರುವ ಮುರುಘಾ ಶ್ರೀಗಳು ಈ ಆರೋಪದಿಂದ ಶೀಘ್ರದಲ್ಲೇ ಮುಕ್ತವಾಗಿ ಆಧ್ಯಾತ್ಮಿಕ ಸೇವೆಯನ್ನು ಪುನಃ ಪ್ರಾರಂಭಿಸುತ್ತಾರೆ ಎಂಬುದು ಇಲ್ಲಿನ ಭಕ್ತರ ಆಶಯವಾಗಿದೆ.
ಪಬ್ಲಿಕ್ ನೆಕ್ಸ್ಟ ವರದಿ : ಸಂತೋಷ ಬಡಕಂಬಿ, ಅಥಣಿ.
PublicNext
30/08/2022 06:05 pm