ಕೊಪ್ಪಳ: ಜಿಲ್ಲೆಯಲ್ಲಿ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಪರಿಣಾಮ ಹಳ್ಳ, ತೊರೆಗಳು ಉಕ್ಕಿ ಹರಿಯುತ್ತಿವೆ. ಈ ವೇಳೆ ಹೊಲದಲ್ಲಿದ್ದ ರೈತನೋರ್ವ ಕೊಚ್ಚಿ ಹೋಗಿದ್ದಾನೆ. ಕುಷ್ಟಗಿ ತಾಲೂಕಿನ ಹಿರೇಮನ್ನಾಪುರದಲ್ಲಿ ಘಟನೆ ನಡೆದಿದ್ದು ಬುಡ್ನೇಸಾಬ (65) ಎಂಬುವರೇ ಮೃತ ರೈತ.
ಹೊಲದಿಂದ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಎತ್ತಿನಬಂಡಿ ಸಮೇತ ಹಳ್ಳ ದಾಟಲು ಬುಡ್ನೇಸಾಬ್ ಮುಂದಾಗಿದ್ದಾರೆ. ಈ ವೇಳೆ ಎತ್ತಿನಬಂಡಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಅದರೊಂದಿಗೆ ಕೊಚ್ಚಿಕೊಂಡು ಹೋದ ಬುಡ್ನೇಸಾಬ್ ಅಸುನೀಗಿದ್ದಾರೆ. ಅದೃಷ್ಟವಶಾತ್ ಎತ್ತುಗಳು ಪ್ರಾಣಾಪಾಯದಿಂದ ಪಾರಾಗಿವೆ. ಬುಡ್ನೇಸಾಬ್ ಶವ ಪತ್ತೆಯಾಗಿದ್ದು ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
24/10/2021 05:22 pm