ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ಅನುಮತಿ ಇಲ್ಲದೇ ಟಗರಿನ ಕಾಳಗ.. ಇಬ್ಬರ ವಿರುದ್ಧ ಪ್ರಕರಣ ದಾಖಲು.!

ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಕೊಡೇಕಲ್ ಗ್ರಾಮದಲ್ಲಿ ಇದೆ ತಿಂಗಳು 26ರಂದು ಸಾಯಂಕಾಲ 5 ಗಂಟೆಯಿಂದ 27ರ ಬೆಳಗಿನ ಜಾವ 2 ಗಂಟೆಯವರೆಗೆ ಟಗರಿನ ಕಾಳಗ ಆಯೋಜನೆ ಮಾಡಲಾಗಿತ್ತು.

ಅಲ್ಲದೇ ಟಗರಿನ ಕಾಳಗವು ಸುರಪುರ ತಾಲ್ಲೂಕಿನ ಶಾಸಕ ನರಸಿಂಹ ನಾಯಕ ರಾಜುಗೌಡ ಹಾಗೂ ಸಹೋದರ ಬಬ್ಲುಗೌಡ ಅವರ ನೇತೃತ್ವದಲ್ಲಿ ನಡೆದಿದ್ದು, ಟಗರಿನ ಕಾಳಗಕ್ಕೆ ಸಹೋದರರಿಬ್ಬರೂ ಮುಂದೆ ನಿಂತು ಚಾಲನೆ ಕೊಟ್ಟಿದ್ದರು. ಅಲ್ಲದೇ ಈ ಓಪನ್ ಟಗರಿನ ಕಾಳಗದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.

ದಿವಂಗತ ತಿಮ್ಮಮ್ಮಾ ಗೌಡಶಾನಿ ಅಭಿಮಾನಿ ಬಳಗ ಮತ್ತು ಆರ್.ಟಿ.ಜೆ ಗ್ರೂಪ್ಸ್ ಕೊಡೇಕಲ್ ವತಿಯಿಂದ ಯಾವುದೇ ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆಯದೇ ಓಪನ್ ಟಗರು ಕಾಳಗ ನಡೆಸಿದ್ದರು.

ಸರ್ಕಾರವು ಪ್ರಾಣಿ ಹಿಂಸೆಯನ್ನು ನಿಷೇಧಿಸಲಾಗಿದ್ದರೂ ಸಹ ಟಗರುಗಳನ್ನು ಒಂದಕ್ಕೊಂದು ಡಿಕ್ಕಿ ಹೊಡೆಸಿ ಪ್ರಾಣಿ ಹಿಂಸೆಯಾಗುವಂತಹ ಟಗರಿನ ಕಾಳಗ ಹಮ್ಮಿಕೊಂಡ ಕೊಡೇಕಲ್ ಗ್ರಾಮದ ಆಯೋಜಕರಾದ ಬಸವರಾಜ ಪೂಜಾರಿ ಮತ್ತ ಭೀಮಣ್ಣ ದಂಡಗೋಳ ಇವರಿಬ್ಬರ ವಿರುದ್ದ ಇಂದು ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ಕಲಂ 11 ಪ್ರಾಣಿ ಹಿಂಸೆ ತಡೆ ಕಾಯ್ದೆ 1960 ರ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಅಂತಾ ಯಾದಗಿರಿ ಎಸ್ಪಿ ಡಾ. ಸಿಬಿ ವೇದಮೂರ್ತಿ ಅವರು ತಿಳಿಸಿದ್ದಾರೆ.

-----

ವರದಿ: ಮೌನೇಶ ಬಿ.ಮಂಗಿಹಾಳ,

ಪಬ್ಲಿಕ್ ನೆಕ್ಸ್ಟ್ ಯಾದಗಿರಿ

Edited By : Manjunath H D
PublicNext

PublicNext

29/09/2021 02:35 pm

Cinque Terre

75.72 K

Cinque Terre

2