ಅಲ್ಜಿಯರ್ಸ್: ಅಲ್ಜೀರಿಯಾದಲ್ಲಿ ಕಾಡ್ಗಿಚ್ಚಿನ ಆರ್ಭಟ ಜೋರಾಗಿದ್ದು, ಬೆಂಕಿಯ ಕೆನ್ನಾಲಗೆಗೆ 25 ಸೈನಿಕರು ಸೇರಿದಂತೆ 42ಕ್ಕೂ ಹೆಚ್ಚು ಜನರು ಸಜೀವ ದಹನವಾಗಿದ್ದಾರೆ.
ಅಲ್ಜೀರಿಯಾದ ರಾಜಧಾನಿ ಅಲ್ಜಿಯರ್ಸ್ ಪೂರ್ವದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಕಬೈಲ್ ಪ್ರದೇಶ ಮತ್ತು ಇತರೆಡೆಗಳಲ್ಲಿ ಸೋಮವಾರ ಬೆಂಕಿ ಆರಂಭವಾಯಿತು. ತಕ್ಷಣವೇ ಸೈನ್ಯವು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು, ಬೆಂಕಿ ನಂದಿಸುವ ಕಾರ್ಯ ಕೂಡ ನಡೆಸಿದೆ. ಬೆಂಕಿ ಕಾಣಿಸಿಕೊಂಡಿರುವ ಪ್ರದೇಶದ ಸಮೀಪದಲ್ಲಿ ವಾಸಿಸುತ್ತಿರುವ ಜನರನ್ನು ಸ್ಥಳಾಂತರಿಸಲಾಗಿದೆ. ಭಾರಿ ಕಾಡ್ಗಿಚ್ಚಿನಲ್ಲಿ ಜಾನುವಾರು ಹಾಗೂ ಇತರೆ ಪ್ರಾಣಿ ಪಕ್ಷಿಗಳು ಮೃತ ಪಟ್ಟಿವೆ ಎನ್ನಲಾಗಿದೆ.
ಅಲ್ಜೀರಿಯಾದ ಪ್ರಧಾನಿ ಅಯ್ಮಾನ್ ಬೆನಾಬ್ದೆರ್ ರೆಹ್ಮಾನ್, ಅಂತರರಾಷ್ಟ್ರೀಯ ಸಮುದಾಯದಿಂದ ಸಹಾಯ ಕೇಳಿದೆ. ಇದರೊಂದಿಗೆ ಬೆಂಕಿಯನ್ನು ನಂದಿಸಲು ವಿಮಾನಗಳನ್ನು ಬಾಡಿಗೆಗೆ ಪಡೆಯಲು ಪಾಲುದಾರರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.
PublicNext
11/08/2021 09:16 am