ಕುಮಟಾ: ಸಮುದ್ರದಲ್ಲಿ ಈಜಲು ತೆರಳಿದ್ದ ನಾಲ್ವರು ಯುವಕರು ನೀರು ಪಾಲಾಗಿದ್ದಾರೆ. ಇಬ್ಬರ ಮೃತದೇಹ ಸಿಕ್ಕಿದ್ದು ಇನ್ನಿಬ್ಬರ ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಬೆಂಗಳೂರಿನಿಂದ ಪ್ರವಾಸಕ್ಕಾಗಿ ಬಂದಿದ್ದ ಇವರು ಈಜುವ ವೇಳೆ ರಭಸದಿಂದ ಬಂದ ಅಲೆಗೆ ಸಿಲುಕಿ ಕೊಚ್ಚಿ ಹೋಗಿದ್ದಾರೆ.
ಬೆಂಗಳೂರು ಬೈಪಾಸ್ ರಸ್ತೆಯ ಕಸ್ತೂರಿನಗರ ನಿವಾಸಿ ಸಿ.ಎ ಫಾರ್ಮ್ ನೌಕರ ಅರ್ಜುನ್ ವಾಸುದೇವ (23), ಬೆಂಗಳೂರಿನ ಪೀಣ್ಯ 2 ನೇ ಕ್ರಾಸ್‌ನ ಸಿಎ ವಿದ್ಯಾರ್ಥಿನಿ ಚೈತ್ರಶ್ರೀ ಗೋಪಾಲ್ ಎಂ (22) ಮೃತಪಟ್ಟವರಾಗಿದ್ದಾರೆ. ಬೆಂಗಳೂರಿನ ರಾಜಾಜಿನಗರ ಹಾಲಿ ಜೆ.ಪಿ.ನಗರ ಸಿ.ಎ ವಿದ್ಯಾರ್ಥಿ ತೇಜಸ್ ದಾಮೋದರ ಎ (22), ಬೆಂಗಳೂರಿನ ಕನಕಪುರ ರಸ್ತೆಯ ಸಿ.ಎ ಫಾರ್ಮ್ ನೌಕರ ಕಿರಣಕುಮಾರ್ ಮರಿರಾಜ ಜಿ (27) ನಾಪತ್ತೆಯಾದವರಾಗಿದ್ದಾರೆ. ಬೆಂಗಳೂರಿನಿಂದ 89 ಸ್ನೇಹಿತರ ಗುಂಪೊಂದು ಪ್ರವಾಸಕ್ಕೆಂದು ಬಾಡ ಸಮೀಪದ ಖಾಸಗಿ ರೆಸಾರ್ಟ್‌ಗೆ ಆಗಮಿಸಿದ್ದರು.
ಇನ್ನು ಘಟನೆಯಲ್ಲಿ ಚೈತ್ರಶ್ರೀ ಎಂಬ ಯುವತಿಯನ್ನು ರಕ್ಷಿಸಲಾಗಿದ್ದು ಕುಮಟಾ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ. ಅರ್ಜುನ್ ವಾಸುದೇವ ಎಂಬಾತನ ಮೃತ ದೇಹ ದೊರೆತಿದೆ.
PublicNext
26/06/2022 08:26 am