ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಮಹಿಳೆ ಮೇಲೆ ಹಲ್ಲೆ ಮಾಡಿದ್ದವನಿಗೆ ಜೈಲು ಶಿಕ್ಷೆ!

ಕಾರವಾರ: ಹೊನ್ನಾವರ ತಾಲೂಕಿನ ಕೆರೆಕೋಣ ಗ್ರಾಮದ ಭಾರತಿ ಶೆಟ್ಟಿ ಎನ್ನುವವರಿಗೆ ಹಲ್ಲೆ ಮಾಡಿದ್ದ ಆರೋಪಿ ಗಣೇಶ ಶೆಟ್ಟಿ ಎಂಬಾತನಿಗೆ ಜೈಲು ಶಿಕ್ಷೆ ವಿಧಿಸಿ ಹೊನ್ನಾವರ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ. ನ್ಯಾಯಾಲಯ ಆದೇಶಿಸಿದೆ.

ನ್ಯಾಯಾಧೀಶ ಚಂದ್ರಶೇಖರ್ ಇ.ಬಣಕಾರರವರು ವಿಚಾರಣೆ ನಡೆಸಿ ಆರೋಪಿಗೆ ಭಾರತೀಯ ದಂಡ ಸಂಹಿತೆ ಕಲಂ 34ಕ್ಕೆ 1 ತಿಂಗಳ ಸಾದಾ ಜೈಲುವಾಸ, ಕಲಂ 323ಕ್ಕೆ 6 ತಿಂಗಳ ಜೈಲುವಾಸ, ಕಲಂ 324 ಕ್ಕೆ 8 ತಿಂಗಳ ಜೈಲುವಾಸ, ಕಲಂ 504 ಕ್ಕೆ 6 ತಿಂಗಳ ಜೈಲುವಾಸ, ಕಲಂ 506 ಕ್ಕೆ 6 ತಿಂಗಳ ಜೈಲುವಾಸ ಶಿಕ್ಷೆ ವಿಧಿಸಿದ್ದಾರೆ.

ಆರೋಪಿತ ಕಳೆದ ವರ್ಷ ಡಿ.7ರಂದು ಕೆರೆಕೋಣ ಗ್ರಾಮದ ಭಾರತಿ ಶೆಟ್ಟಿ ಅವರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದನು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಪ್ರಕರಣವನ್ನು ಪಿಎಸೈ ಮಹಾಂತೇಶ ನಾಯಕ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಲಯಕ್ಕೆ ಸಲ್ಲಿಸಿದ್ದರು. ದೂರುದಾರರ ಪರವಾಗಿ ಸಹಾಯಕ ಸರ್ಕಾರಿ ವಕೀಲರಾದ ಸಂಪದಾ ಗುನಗಾ ಈ ಪ್ರಕರಣದಲ್ಲಿ 8 ಜನ ಸಾಕ್ಷಿದಾರರನ್ನು ವಿಚಾರಿಸಿ ವಾದಿಸಿದ್ದರು.

Edited By : Nagaraj Tulugeri
PublicNext

PublicNext

09/09/2022 09:43 am

Cinque Terre

41.59 K

Cinque Terre

0

ಸಂಬಂಧಿತ ಸುದ್ದಿ