ಬೆಂಗಳೂರು: ಬೆಂಗಳೂರಿನಲ್ಲಿ ಉಗ್ರನೊಬ್ಬ ಸಿಕ್ಕ ಬಳಿಕ ಕರ್ನಾಟಕ ಉಗ್ರರ ಅಡಗುತಾಣವಾಗ್ತಿದ್ಯಾ ಎನ್ನುವ ಆತಂಕಕಾರಿ ಪ್ರಶ್ನೆ ಉದ್ಬವವಾಗಿದೆ.ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಸಿಕ್ಕ ಉಗ್ರರ ಸಂಖ್ಯೆ ಕೇಳಿದ್ರೆ ಶಾಕ್ ಆಗುತ್ತ. ಕರ್ನಾಟಕ ಸೇಫ್ ಅಂತ ರಾಜ್ಯದಲ್ಲೆ ಬಂದು ಸೇರಿಕೊಳ್ತಾ ಇದ್ದಾರ ಉಗ್ರರು ಎನ್ನುವ ಅನುಮಾನ ಮೂಡಿದೆ.
ಕಳೆದ ವರ್ಷ ಜೂನ್ ನ ನಿಂದ ಇಲ್ಲಿವರೆಗೂ ರಾಜ್ಯದಲ್ಲಿ ಬರೋಬ್ಬರಿ ಎಂಟು ಉಗ್ರರರು ಸೆರೆ ಸಿಕ್ಕಿದ್ದು,ಎಲ್ಲಾ ಉಗ್ರರ ಬಂಧನವೂ ಮಂಗಳೂರ ಹಾಗೂ ಬೆಂಗಳೂರಿನಲ್ಲೆ ಆಗಿದೆ.
ರಾಜ್ಯದಲ್ಲಿ ಒಂದೇ ವರ್ಷದಲ್ಲಿ ಎಂಟು ಜನ ಉಗ್ರರು ಪತ್ತೆಯಾಗಿರುವುದು ಇದೆ ಮೊದಲಾಗಿದ್ದು, ಉಗ್ರರ ವಿವರ ಈ ಕೆಳಗಿನಂತಿದೆ.
1.ಅಮರ್ ಅಬ್ದುಲ್ ರೆಹಮಾನ್, ಹಾಗೂ ಶಂಕರ್ ವೆಂಕಟೇಶ್ ಪೆರುಮಾಳ್ ಕೇರಳ ಐಸಿಸ್ ನೇಮಕಾತಿ ಕೇಸ್
2.ಜೋಯೆಬ್ ಮನ್ನಾ ,ಇರ್ಫಾನ್ ನಾಸೀರ್, ಮಹಮ್ಮದ್ ತಕ್ವೀರ್, ಆಹಮ್ಮದ್ ಖಾದರ್ ಐಸಿಸ್ ರಿಕ್ರೂಟ್ ಮೆಂಟ್ ಬೆಂಗಳೂರು
3.ದೀಪ್ತಿ ಮಾರ್ಲಾ, ಜನವರಿ 2022 ಲವ್ ಜಿಹಾದ್
4.ತಾಲೀಬ್ ಹುಸೇನ್ , ಹಿಜ್ಬುಲ್ ಮುಜಾಹಿದ್ದೀನ್
ಇಷ್ಟು ಪ್ರಮಾಣದಲ್ಲಿ ಉಗ್ರರು ಸಿಕ್ಕಿ ಬೀಳ್ತಾ ಇದ್ರು ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿಲ್ಲ.ಇನ್ನೂ ಫನಿಷ್ಮೆಂಟ್ ಇಲಾಖೆಗಳಾಗಿ ಉಳಿದುಕೊಂಡಿರೋ ಸಿಟಿ ಎಸ್ ಬಿ ಹಾಗೂ ಗುಪ್ತಚರ ಇಲಾಖೆ ಹಾಗೂ ಆಂತರಿಕ ಭದ್ರತಾ ವಿಭಾಗಕ್ಕೆ ಈ ಉಗ್ರ ಚಟುವಟಿಕೆ ಕುರಿತು ಮಾಹಿತಿನೇ ಇಲ್ವಾ ಎನ್ನುವ ಪ್ರಶ್ನೆ ಮೂಡಿದೆ.
ಎರಡು ವರ್ಷದಿಂದ ನಗರದಲ್ಲಿ ವಾಸವಾಗಿದ್ದ ತಾಲೀಬ್ ನ ಕಾಶ್ಮೀರ ಪೊಲೀಸರು ಬಂಧಿಸುವವರೆಗೂ ಉಗ್ರನ ಬಗ್ಗೆ ಸ್ಥಳೀಯ ಪೊಲೀಸ್ರಿಗೆ ಮಾಹಿತಿ ಇರಲಿಲ್ಲ ಎಂದು ಖುದ್ದು ಕಮಿಷನರ್ ಹೇಳಿರೋದು ಆತಂಕಕಾರಿ ವಿಚಾರವಾಗಿದೆ. ಇದೇ ವೈಫಲ್ಯದಿಂದ ಕರ್ನಾಟಕ ಉಗ್ರರ ಅಡಗುತಾಣವಾಗ್ತಿದ್ಯ ಎನ್ನುವುದು ಸಹಜ ಅನುಮಾನ ವ್ಯಕ್ತವಾಗಿದೆ.
PublicNext
08/06/2022 10:57 am