ಬೆಂಗಳೂರು: ಜೈಲಿನಿಂದ ಹಾರಿದ ರಾಣಾ ಶೇರ್ ಸಿಂಗ್ ಮುಂದಿನ ಜೀವನ ನಿಜಕ್ಕೂ ಕುತೂಹಲ ಮತ್ತು ಆತಂಕಕಾರಿ ಆಗಿಯೇ ಇದೆ. ಯಾಕಂದ್ರೆ ಬಾಂಗ್ಲಾ ಮೂಲಕ ರಾಣ ಕಂದಾಹಾರ್ ತಲುಪಿದ್ದು, ಇಲ್ಲಿಯ ರಜಪೂತರ ರಾಜ ಪೃಥ್ವಿರಾಜ್ ಚೌಹಾನ್ ರ ಸಮಾಧಿಯಲ್ಲಿದ್ದ ಅಸ್ಥಿಗಳನ್ನೆ ಎಗರಿಸಿದ್ದಾನೆ.
ಈ ಸಮಾಧಿಗೆ ಅಲ್ಲಿನವರು ನಿತ್ಯ ರಸ್ತೆಯಲ್ಲಿ ಸಾಗುವಾಗ ಚಪ್ಪಲಿಯಿಂದ ಹೊಡೆದು ಹೋಗ್ತಿರ್ತಾರೆ. ಇದನ್ನ ಸಹಿಸದ ರಾಣ ಕಂದಹಾರ್ ನಲ್ಲಿ ಮೊಕ್ಕಂ ಹುಡಿ ಅಲ್ಲಿ ಒಂದು ದಿನ ರಾತ್ರಿ ಚೌಹಾನರ ಸಮಾಧಿ ಅಗೆದು ಅಸ್ಥಿ ಸಮೇತ ಇಂಡಿಯಾಗೆ ವಾಪಸ್ ಆಗ್ತಾರೆ.
ತನ್ನ ರಾಜನ ಸಮಾಧಿ ಆಗ್ತಿದ್ದ ಅವಮಾನ ಸಹಿಸಲಾರದೆ ತನ್ನ ಜೀವ ಪಣಕ್ಕಿಟ್ಟು ಚೌಹಾನ್‌ರ ಅಸ್ಥಿ ಭಾರತಕ್ಕೆ ತಂದಿದ್ದ ರಾಣಾನನ್ನ ನಂತರ ಪೊಲೀಸ್ರು ಮತ್ತೆ ಬಂಧಿಸ್ತಾರೆ. ಈ ಚೌಹಾನರ ಅಸ್ಥಿ ಕುರಿತು ರೋಚಕ ರಹಸ್ಯವನ್ನ ಸ್ವಂತ ರಾಣ ಶೇರ್ ಸಿಂಗ್ ಪಬ್ಲಿಕ್ ನೆಕ್ಸ್ಟ್ ಜೊತೆ ಹಂಚಿಕೊಂಡಿದ್ದಾನೆ.
PublicNext
21/05/2022 02:07 pm