ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಿಎಸ್ಐ ಅಕ್ರಮ ಪ್ರಕರಣದ ತನಿಖೆ ಚುರುಕುಗೊಳಿಸಿದ ಸಿಐಡಿ

ಬೆಂಗಳೂರು:ಪಿಎಸ್ ಐ ನೇಮಕಾತಿ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಐಡಿ ಸ್ಪೇಷಲ್ ಟೀಂ ಹಲವು ಆಯಾಮದಲ್ಲಿ ತನಿಖೆ ಮಾಡಿ ಆರೋಪಿಗಳನ್ನು ಅರೆಸ್ಟ್ ಮಾಡ್ತಿದೆ. ಸದ್ಯ ಸಿಐಡಿ ತನಿಖೆಯಲ್ಲಿ ಪತ್ತೆಯಾದ ಪರೀಕ್ಷಾ ಅಕ್ರಮಗಳ ಬಗ್ಗೆ ಸಿಐಡಿ ಮಾಹಿತಿ ಕಲೆ ಹಾಕಿದೆ.

ಪ್ರಮುಖವಾಗಿ ಸಿಐಡಿ ಮಾಹಿತಿ ಕಲೆ ಹಾಕಿರೋ ಅಂಶಗಳನ್ನ ನೋಡೋದಾದ್ರೆ.

1. ಬ್ಲೂಟೂತ್ ಬಳಕೆ ಮಾಡಿ ಎಕ್ಸಾಂ ಬರೆಯಲಾಗಿದೆ

2. ಒಎಂಆರ್ ಪ್ರತಿಯನ್ನ ಎಕ್ಸಾಂ ಸೆಂಟರ್ ನಲ್ಲಿ ತಿದ್ದುಪಡಿ ಮಾಡಿರೋದು

3. ನೇಮಕಾತಿ ವಿಭಾಗದಲ್ಲಿ ಒಎಂಆರ್ ಪ್ರತಿಯಲ್ಲಿ ಅಕ್ರಮವಾಗಿ ತಿದ್ದುಪಡಿ

4. ಕೆಲವರು ಫಿಸಿಕಲ್ ವೇಳೆ ಹಣ ನೀಡಿ ಅಕ್ರಮ ಎಸಗಿರೋದು ಪತ್ತೆ

5. ಸಂಪೂರ್ಣ ಹುದ್ದೆಯನ್ನು ಡೀಲ್ ಮಾಡಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ

6. ಮೊದಲ ಪ್ರಶ್ನೆ ಪತ್ರಿಕೆ ಡೀಲ್ ಮಾಡಿ ಬರೆಯಲಾಗಿದೆ

7.ಎರಡನೇ ಪ್ರಶ್ನೆ ಪತ್ರಿಕೆ ಡೀಲ್ ಮಾಡಿ ಪರೀಕ್ಷೆ ಬರೆಯಲಾಗಿದೆ

8. ಎಕ್ಸಾಂ ಸೆಂಟರ್ ಬುಕ್ ಮಾಡಿ ಅಕ್ರಮ ಎಸಗಿರೋದು ಪತ್ತೆಯಾಗಿದೆ.

ನೇಮಕಾತಿ ವಿಭಾಗಕ್ಕೂ ಅಕ್ರಮಕ್ಕೂ ಲಿಂಕ್ ಇರೋ ಬಗ್ಗೆ

ಸಿಐಡಿ ಸೂಕ್ತ ಸಾಕ್ಷಾಧಾರ ಕಲೆ ಹಾಕ್ತಿದೆ. ನೇಮಕಾತಿ ವಿಭಾಗದ ಮೇಲೆ ತನಿಖಾ ತಂಡಕ್ಕೆ ಹೆಚ್ಚು ಅನುಮಾನವಿದ್ದು, ಇನ್ನೂ ನೇಮಕಾತಿ ವಿಭಾಗದಲ್ಲೂ ಒಂದು ಅನುಮಾನ ಗಳನ್ನು ಸಿಐಡಿ ಪಟ್ಟಿ ಮಾಡಿದೆ.

1. ಪರೀಕ್ಷಾ ಕೇಂದ್ರವನ್ನ ಹಾಕಿಸಿಕೊಳ್ಳುವಲ್ಲೇ ಅಕ್ರಮ ವಾಗಿರೋ ಅನುಮಾನ

2. ಪ್ರಶ್ನೆ ಪತ್ರಿಕೆ ತಯಾರಿಕೆ ಗುಟ್ಟು ಹೊರ ಹಾಕಿರುವ ಬಗ್ಗೆ ಅನುಮಾನ

3. ಇನ್ವಿಸಿಲೇಟರ್ ಆಗಿದ್ದ ಡಿವೈಎಸ್ಪಿಗಳು ಬುಕ್ ಆಗಿರೋ ಶಂಕೆ

4. ಕಲೆಕ್ಟ್ ಆದ ಪ್ರಶ್ನೆ ಪತ್ರಿಕೆಯ ಪರೀಕ್ಷೆ ಮೊದಲೇ ಓಪನ್ ಶಂಕೆ.?

5. ಪರೀಕ್ಷೆಯಲ್ಲಿ ಅಕ್ರಮಕ್ಕೆ ಇನ್ವಿಸಿಲೇಟರ್ ಡಿವೈಎಸ್ಪಿ ಸಾಥ್ ನೀಡಿರೋ ಸಾಧ್ಯತೆ

6. ಪರೀಕ್ಷಾ ಕೇಂದ್ರದ ಮೇಲ್ವಿಚಾರಕರ ಫ್ರೀ ಬುಕಿಂಗ್ ಮಾಡಿ ಅಕ್ರಮ

7. ಪರೀಕ್ಷಾ ಕೇಂದ್ರದ ಮಾಲೀಕರ ಜೊತೆ ನೇಮಕಾತಿ ವಿಭಾಗ ಲಿಂಕ್

8. ತಮಗೆ ಬೇಕಾದ ರೀತಿಯಲ್ಲಿ ವ್ಯವಸ್ಥೆ ಮಾಡಿಸಿ ಅಕ್ರಮ.?

9. ಒಎಂಆರ್ ಕಾರ್ಬನ್ ಪ್ರತಿಯನ್ನು ಕಲೆಕ್ಟ್ ಮಾಡಿಸಿ ಅಕ್ರಮ

10. ಮೇಲ್ವಿಚಾರಕರಿಗೆ ಇನ್ವಸಿಲೇಟರ್ ಮೊದಲೆ ಪ್ರಶ್ನೆ ಪತ್ರಿಕೆ ಕೊಟ್ಟಿರಬಹುದು

11. ಕಿಂಗ್ ಪಿನ್ ಗಳಿಗೆ ಪ್ರಶ್ನೆ ಪತ್ರಿಕೆಯನ್ನ ಅಕ್ರಮವಾಗಿ ಲೀಕ್

12. ಆನಂತರ ಬ್ಲೂ ಟೂತ್ ನಲ್ಲಿ ಉತ್ತರ ನೀಡಲು ಸಹಾಯ ಶಂಕೆ

13. ಡಿವೈಎಸ್ಪಿ ಗೂ ಪರೀಕ್ಷಾ ಕೇಂದ್ರಕ್ಕೂ ಮೊದಲೇ ಲಿಂಕ್ ಶಂಕೆ

14. ವ್ಯಾಲ್ಯೂವೇಷನ್ ವೇಳೆ ಉತ್ತರ ಬರೆದು ಸ್ಕ್ಯಾಮ್ ಆಗಿರುವ ಶಂಕೆ

ಇದೇ ಆಧಾರದ ಮೇಲೆ ನೇಮಕಾತಿ ವಿಭಾಗದ 42 ಸಿಬ್ಬಂದಿ ವಿಚಾರಣೆಗೆ ನಡೆಸಲು ತನಿಖಾಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಈಗಾಗಲೇ ಇನ್ವಿಸಿಲೇಟರ್ ಆಗಿ ಬಂದಿದ್ದ ಓರ್ವ ಫಿಂಗರ್ ಪ್ರಿಂಟ್ ವಿಭಾಗದ ಅಧಿಕಾರಿ ವಶಕ್ಕೆ ಪಡೆದು ತನಿಖೆ ನಡೆಸಲಾಗ್ತಿದೆ.

Edited By : Nirmala Aralikatti
PublicNext

PublicNext

07/05/2022 01:12 pm

Cinque Terre

67.22 K

Cinque Terre

1

ಸಂಬಂಧಿತ ಸುದ್ದಿ