ಬೆಂಗಳೂರು: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ ಬೆನ್ನಲ್ಲೇ ನೇಮಕಾತಿ ವಿಭಾಗದಲ್ಲಿ ಭಾರೀ ಬದಲಾವಣೆಯಾಗಿದೆ. 17 ಅಧಿಕಾರಿ ಮತ್ತು ಸಿಬ್ಬಂದಿ ಗಳಲ್ಲಿ 12 ಜನರ ವರ್ಗಾವಣೆ ಮಾಡಿದ ಎಡಿಜಿಪಿ ಹಿತೇಂದ್ರ ಆದೇಶ ಹೊರಡಿಸಿದ್ದಾರೆ.
ಹಿತೇಂದ್ರ ಎಡಿಜಿಪಿ ಆಗಿ ವರ್ಗಾವಣೆಗೊಂಡ ಬಳಿಕ ಮಾಸ್ ಟ್ರಾನ್ಸ್ಫರ್ ಮಾಡಿದ್ದಾರೆ. ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮದಲ್ಲಿ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಇದ್ರಿಂದ ಇಲಾಖೆಗೆ ಕೆಟ್ಟ ಹೆಸರು ಬಂದ ಹಿನ್ನೆಲೆ ಹಿತೇಂದ್ರ ಇಂಥಹದೊಂದು ನಿರ್ಧಾರ ಕೈಗೊಂಡಿದ್ದಾರೆ.
ಇದೇ ಕಾರಣಕ್ಕೆ ನೇಮಕಾತಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ 17 ಮಂದಿ ಪೈಕಿ 12 ಜನರನ್ನು ಬೇರೆ ಬೇರೆ ಕಡೆ ವರ್ಗಾವಣೆ ಮಾಡಲಾಗಿದೆ.ಸದ್ಯಕ್ಕೆ ಕಚೇರಿ ಕರ್ತವ್ಯ ನಿರ್ವಹಣೆಗಾಗಿ 5 ಜನರನ್ನು ಉಳಿಸಿಕೊಳ್ಳಲಾಗಿದ್ದು ಖಾಲಿ ಇರುವ 12 ಸ್ಥಾನಕ್ಕೆ ಹೊಸಬರು ಬಂದ ಬಳಿಕ ಉಳಿದ ಐವರ ಬದಲಾವಣೆಯಾಗುವ ಸಾಧ್ಯತೆಯಿದೆ. ಒಟ್ಟಾರೆ ನೇಮಕಾತಿ ವಿಭಾಗಕ್ಕೆ ಹೊಸ ಅಧಿಕಾರಿ ಸಿಬ್ಬಂದಿ ನೇಮಕವಾಗಿದೆ.
PublicNext
07/05/2022 12:42 pm