ಪಟ್ನಾ: ಜೈಲಿನಲ್ಲಿರುವ ತನ್ನ ಮಗನನ್ನು ಬಿಡಿಸಿಕೊಳ್ಳಲು ಮನವಿ ಮಾಡಲು ಬಂದಿದ್ದ ಮಹಿಳೆಯಿಂದ ಪೊಲೀಸಪ್ಪ ಒತ್ತಾಯಪೂರ್ವಕವಾಗಿ ಮಸಾಜ್ ಮಾಡಿಸಿಕೊಂಡು ಸದ್ಯ ಸಸ್ಪೆಂಡ ಆಗಿದ್ದಾರೆ.
ಹೌದು ಬಿಹಾರದ ನೌಹಟ್ಟಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಶಶಿಭೂಷಣ್ ಸಿನ್ಹಾ ಅಮಾನತ್ತಾದ ಅಧಿಕಾರಿ. ಈತ ನೌಹಟ್ಟಾ ಠಾಣೆಯ ಔಟ್ ಪೋಸ್ಟ್ ನಲ್ಲಿರುವ ವಸತಿ ಗೃಹದಲ್ಲಿ ಶರ್ಟ್ ಬಿಚ್ಚಿ ರಾಜಾರೋಷವಾಗಿ ಮಹಿಳೆಯಿಂದ ಮಸಾಜ್ ಮಾಡಿಸಿಕೊಳ್ಳುತ್ತಿರುವಾಗ ವೀಡಿಯೋ ಚಿತ್ರಿಕರಿಸಿ ವೈರಲ್ ಮಾಡಲಾಗಿದೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ವೀಡಿಯೊ ನೋಡಿದ ಸಹರ್ಸಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಿಪಿ ಸಿಂಗ್, ಶಶಿಭೂಷಣ ಸಿನ್ಹಾ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
PublicNext
29/04/2022 01:47 pm