ಅಹಮದಾಬಾದ್(ಗುಜರಾತ್): ಖಾಕಿ ಅಂದ್ರೆ ಅದಕ್ಕೊಂದು ವೃತ್ತಿ ಗೌರವ ಇದೆ. ಘನತೆ ಇದೆ. ಕೆಲವರು ಮಾಡುವ ಕೆಟ್ಟ ಕೆಲಸದಿಂದ ಇತರರಿಗೂ ಕೆಟ್ಟ ಹೆಸರು ಬರುತ್ತೆ.
ಗುಜರಾತ್‌ನ ಕಚ್ ಜಿಲ್ಲೆಯ ಗಾಂಧಿಧಾಮ್‌ನಲ್ಲಿ ಈ ಘಟನೆ ನಡೆದಿದೆ. ಕರ್ತವ್ಯದಲ್ಲಿದ್ದ ಪೊಲೀಸರು ಪೊಲೀಸ್ ವಾಹನದಲ್ಲೇ ಹಿಂದಿ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಸಮವಸ್ತ್ರದಲ್ಲಿಯೇ ಇವರು ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿದ್ದು ಪೊಲೀಸರ ಈ ವರ್ತನೆ ಮೇಲೆ ಸಾರ್ವಜನಿಕರು ಆಕ್ರೋಶಿತರಾಗಿದ್ದಾರೆ.
ತೀವ್ರ ವಿರೋಧ ಕೇಳಿಬಂದ ಕೂಡಲೇ ಇಲಾಖೆ ಶಿಸ್ತು ಉಲ್ಲಂಘನೆ ಎಂದು ಪರಿಗಣಿಸಿ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
PublicNext
21/01/2022 10:14 pm