ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಶಕ್ಕೆ ಪಡೆದ 2.5 ಲಕ್ಷ ರೂ. ಮೌಲ್ಯದ ಬಿಟ್‌ ಕಾಯಿನ್ ಸುರಕ್ಷಿತ: ಕಮಲ್ ಪಂತ್‌ ಸ್ಪಷ್ಟನೆ

ಬೆಂಗಳೂರು: ಬಿಟ್ ಕಾಯಿನ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಕ್ಸಮರ ವೈಯಕ್ತಿಕ ಜೀವನಕ್ಕೆ ಬಂದು ತಲುಪಿದೆ. ಈ ಮಧ್ಯೆ ಪೊಲೀಸರು ವಶಕ್ಕೆ ಪಡೆದಿದ್ದ 0.08 ಬಿಟ್ ಕಾಯಿನ್ ನಾಪತ್ತೆಯಾಗಿದೆ ಎಂಬ ಆರೋಪವೂ ಕೇಳಿ ಬಂದಿದ್ದು, ಈ ಕುರಿತು ನಗರ ಪೊಲೀಸ್ ಆಯುಕ್ತರ ಕಚೇರಿ ಗುರುವಾರ ಸ್ಪಷ್ಟನೆ ನೀಡಿದೆ.

ಬಿಟ್ ಕಾಯಿನ್ ಹಗರಣ ಸಂಬಂಧ ಖಂಡೇವಾಲಾ ವ್ಯಾಲೆಟ್ ನಿಂದ ಜಪ್ತಿಯಾದ ಬಿಟ್ ಕಾಯಿನ್ ನಾಪತ್ತೆಯಾಗಿದೆ ಎಂದು ಪ್ರಿಯಾಂಕ ಖರ್ಗೆ ಈ ಹಿಂದೆ ಆರೋಪಿಸಿದ್ದರು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಬೆಂಗಳೂರು ಪೊಲೀಸ್‌ ಕಮಿಷನರ್‌ ಕಮಲ್ ಪಂತ್‌, "ಹ್ಯಾಕರ್ ಶ್ರೀಕೃಷ್ಣ ಭಾಗಿಯಾಗಿದ್ದ ಪ್ರಕರಣದಲ್ಲಿ ಆತನ ನಿಕಟವರ್ತಿ ರಾಬಿನ್‌ ಖಂಡೇಲ್‌ವಾಲಾ ಎಂಬಾತನಿಂದ ವಶಕ್ಕೆ ಪಡೆದಿದ್ದ 2.5 ಲಕ್ಷ ರೂ. ಮೌಲ್ಯದ (ಜಪ್ತಿ ಮಾಡಿದಾಗಿನ ಮೌಲ್ಯ) 0.08 ಬಿಟ್‌ಕಾಯಿನ್ ಹಾಗೂ ಮೂರು ಕ್ರಿಪ್ಟೋ ಕರೆನ್ಸಿಗಳು ಪೊಲೀಸ್‌ ವ್ಯಾಲೆಟ್‌ನಲ್ಲಿ ಸುರಕ್ಷಿತವಾಗಿವೆ" ಎಂದು ನೀಡಿದ್ದಾರೆ.

'ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಜೊತೆ ವ್ಯವಹರಿಸುತ್ತಿದ್ದ ರಾಬಿನ್‌ ಖಂಡೇಲ್‌ವಾಲಾ ಖಾತೆಯಿಂದ ಜಪ್ತಿ ಮಾಡಲಾಗಿದ್ದ ಬಿಟ್‌ಕಾಯಿನ್‌ಗಳು ನಾಪತ್ತೆಯಾಗಿವೆ ಎಂಬ ಆರೋಪದಲ್ಲಿ ಹುರುಳಿಲ್ಲ. ಅವುಗಳಲ್ಲಿ ಯಾವ ವ್ಯತ್ಯಾಸವೂ ಆಗಿಲ್ಲ. ಪಂಚರ ಸಮಕ್ಷಮದಲ್ಲಿ 0.08 ಬಿಟ್‌ಕಾಯಿನ್‌ ಮತ್ತು ಮೂರು ಕ್ರಿಪ್ಟೋಕರೆನ್ಸಿಗಳನ್ನು ಪೊಲೀಸ್‌ ವ್ಯಾಲೆಟ್‌ಗೆ ವರ್ಗಾಯಿಸಲಾಗಿತ್ತು. ಈ ಬಗ್ಗೆ ನ್ಯಾಯಾಲಯಕ್ಕೂ ಮಾಹಿತಿ ನೀಡಲಾಗಿತ್ತು. ಈ ಕುರಿತು ಪ್ರಕರಣದ ಆರೋಪಪಟ್ಟಿಯಲ್ಲೂ ಉಲ್ಲೇಖಿಸಲಾಗಿತ್ತು' ಎಂದು ಕಮಲ್ ಪಂತ್‌ ಹೇಳಿದ್ದಾರೆ.

Edited By : Vijay Kumar
PublicNext

PublicNext

19/11/2021 09:25 am

Cinque Terre

35.92 K

Cinque Terre

1

ಸಂಬಂಧಿತ ಸುದ್ದಿ