ನವದೆಹಲಿ : 2010ರಲ್ಲಿ ಗದಗ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದ 5 ವರ್ಷದ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯ ಸಜೆಯನ್ನು ಸುಪ್ರೀಂ ಕೋರ್ಟು ಸೋಮವಾರ 30 ವರ್ಷದ ಜೀವಾವಧಿ ಸಜೆಯಾಗಿ ಪರಿವರ್ತಿಸಿದೆ.
ಇದೇ ವೇಳೆ ಸುಪ್ರೀಂ ಮಹತ್ವ ತೀರ್ಪೊಂದನ್ನು ನೀಡಿದೆ. ಹೌದು 'ಮೃತಳು ಅಪ್ರಾಪ್ತೆಯಾಗಿದ್ದಳು ಎಂಬ ಒಂದೇ ಕಾರಣಕ್ಕೆ ಗಲ್ಲು ಶಿಕ್ಷೆ ನೀಡಲು ಆಗದು' ಎಂದು ಸುಪ್ರೀಂ ಹೇಳಿದೆ. ಕಳೆದ 40 ವರ್ಷದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆದ 67 ಪ್ರಕರಣಗಳ ವಿಚಾರಣೆ ನಡೆದಿವೆ. ಈ 67 ಪ್ರಕರಣಗಳಲ್ಲಿ 15 ಪ್ರಕರಣಗಳಲ್ಲಿ ಮಾತ್ರ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಆದರೆ ಮರುಪರಿಶೀಲನಾ ಅರ್ಜಿಗಳಲ್ಲಿ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಲಾಗಿತ್ತು ಎಂದು ನ್ಯಾ. ನಾಗೇಶ್ವರರಾವ್ ಅವರ ಪೀಠ ಹೇಳಿದೆ.
2019ರಲ್ಲಿ ನರಗುಂದ ತಾಲೂಕಿನ ಖಾನಾಪುರ ಗ್ರಾಮದಲ್ಲಿ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಆಕೆಯ ಶವವನ್ನು ಕತ್ತರಿಸಿ ಚೀಲದಲ್ಲಿ ಕಟ್ಟಿ ಸಮೀಪದ ಬೆಣ್ಣಿಹಳ್ಳಕ್ಕೆ ಎಸೆದಿದ್ದ ಈರಪ್ಪ ಸಿದ್ದಪ್ಪ ಮುರುಗಣ್ಣವರ ಎಂಬಾತ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ.ಈತನಿಗೆ ಗದಗ ಜಿಲ್ಲಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. ಗದಗ ಜಿಲ್ಲಾ ನ್ಯಾಯಾಲಯ ಸ್ಥಾಪನೆಯಾಗಿ ಆ ಕೋರ್ಟು ನೀಡಿದ್ದ ಮೊದಲ ಗಲ್ಲು ಶಿಕ್ಷೆ ತೀರ್ಪು ಇದಾಗಿತ್ತು. ಈ ಆದೇಶವನ್ನು 2017 ರ ಮಾ.6ರಂದು ಕರ್ನಾಟಕ ಹೈಕೋರ್ಟ್ಎತ್ತಿ ಹಿಡಿದಿತ್ತು. ಇದನ್ನು ಈರಪ್ಪನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದ.
PublicNext
10/11/2021 02:11 pm