ನವದೆಹಲಿ: ಸಂಚಾರಿ ಪೊಲೀಸರು ತಮ್ಮ ಡ್ಯೂಟಿ ತಾವು ಮಾಡ್ತಾ ಇರ್ತಾರೆ. ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ರೆ ಅಂತವರಿಗೆ ದಂಡ ಹಾಕ್ತಾರೆ. ಅದೇ ರೀತಿ ನವದೆಹಲಿಯ ಪ್ರಮುಖ ರಸ್ತೆಯೊಂದರಲ್ಲಿ ತ್ರಿಬಲ್ ರೈಡಿಂಗ್ ಹೋಗುತ್ತಿರುವುದನ್ನು ಪ್ರಶ್ನೆ ಮಾಡಿದ್ದಕ್ಕೆ ಇಬ್ಬರು ಯುವತಿಯರು ಪೊಲೀಸರ ಮೇಲೆಯೇ ಏರಿ ಬಂದಿದ್ದಾರೆ.
ಇದಕ್ಕೆ ಸ್ಥಳದಲ್ಲಿದ್ದ ಕೆಲವರು ಸಾಥ್ ಕೊಟ್ಟಿದ್ದಾರೆ. ಗುಂಪಿನ ನಡುವೆ ಸಂಚಾರಿ ಪೊಲೀಸರನ್ನು ಎಳೆದಾಡಿ ದಂಡಿಸಿದ್ದಾರೆ. ಸದ್ಯ ಇದರ ವಿಡಿಯೋ ವೈರಲ್ ಆಗಿದ್ದು ವಿಡಿಯೋ ನೋಡಿದ ನೆಟ್ಟಿಗರು ಯುವತಿಯರ ದುರ್ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
08/06/2022 07:07 pm