ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಕೆರೆ ಶಾಂತಿ ಹೆಸರಿನಲ್ಲಿ ಕೆರೆಗೆ ಎರಡು ಕುರಿಗಳ ಬಲಿ; ಗ್ರಾಮಸ್ಥರ ಮೌಡ್ಯತೆ

ತಾಲೂಕಿನ ನಿಡಗಲ್ ಹೋಬಳಿಯ ಗಡಿ ಗ್ರಾಮವಾದ ಕದಿರೇಹಳ್ಳಿ ಗ್ರಾಮದ ಕೆರೆ 40 ವರ್ಷಗಳ ಬಳಿಕ ಕೆರೆ ತುಂಬಿ ಕೋಡಿ ಹರಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗುರುವಾರ ಕೆರೆಗೆ ಎರಡು ಕುರಿಗಳನ್ನು ಬಲಿ ಕೊಡುವ ಮೂಲಕ ಕೆರೆಗೆ ಶಾಂತಿ ಮಾಡಿ, ಗಂಗಮ್ಮ ದೇವಿಗೆ ವಿಶೇಷ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದ್ದಾರೆ.

ಮೂಢನಂಬಿಕೆ ಆಚರಣೆಯಲ್ಲಿ ಗ್ರಾಮಸ್ಥರು ಸಾರ್ವಜನಿಕವಾಗಿ ಎಲ್ಲರೂ ಬಳಕೆ ಮಾಡುವಂತಹ ಕೆರೆಯ ನೀರಿಗೆ ಪ್ರಾಣಿ ಬಲಿಯನ್ನು ನೀಡಿ ರಕ್ತದೋಕುಳಿ ಮಾಡಿ ಶಾಂತಿ ಮಾಡಿರುವ ವಿಚಾರ ಜಿಲ್ಲೆಯಾದ್ಯಂತ ಹೆಚ್ಚು ಸದ್ದು ಮಾಡುತ್ತಿದೆ. ಇದೊಂದು ಪ್ರಚೋದನಕಾರಿ ಘಟನೆಯಾಗಿದ್ದು ಸಾರ್ವಜನಿಕವಾಗಿ ಇಂತಹ ಆಚರಣೆಗಳಿಗೆ ಯಾರೊಬ್ಬರೂ ಅವಕಾಶ ಕಲ್ಪಿಸಬಾರದು.

ಈ ಬಗ್ಗೆ ಸಂಬಂಧಪಟ್ಟಂತ ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆ ಹಾಗೂ ಪ್ರಾಣಿ ದಯಾ ಸಂಘಗಳು ಈ ಕೃತ್ಯ ಎಸಗಿರುವ ಗ್ರಾಮಸ್ಥರ ಮೇಲೆ ಕಟ್ಟು ನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಮುಂಬರುವ ದಿನಗಳಲ್ಲಿ ಇಂತಹ ವಿಕೃತ ಆಚರಣೆಗಳಿಗೆ ಬ್ರೇಕ್ ಹಾಕಬೇಕು ಅವರಿಗೆ ಸೂಕ್ತ ಸಲಹೆ, ಸೂಚನೆಗಳನ್ನು ನೀಡಬೇಕು ಎಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

ಒಟ್ಟಾರೆ ಕೆರೆ ಶಾಂತಿಗಾಗಿ ಎರಡು ಮೂಕಪ್ರಾಣಿಗಳು ಬಲಿಯಾಗಿರುವುದು ಮಾತ್ರ ವಿಪರ್ಯಾಸವೇ ಸರಿ..

ವರದಿ: ರಾಘವೇಂದ್ರ ದಾಸರಹಳ್ಳಿ ಪಬ್ಲಿಕ್ ನೆಕ್ಸ್ಟ್,ತುಮಕೂರು

Edited By :
PublicNext

PublicNext

01/09/2022 05:35 pm

Cinque Terre

88.69 K

Cinque Terre

4

ಸಂಬಂಧಿತ ಸುದ್ದಿ