ನವದೆಹಲಿ: ಅಗ್ನಿಪಥ್ ಯೋಜನೆಯಲ್ಲಿ ವಿಳಂಬ ಹಾಗೂ ದೋಷ ಖಂಡಿಸಿ ಸಾವಿರಾರು ಸೇನಾಕಾಂಕ್ಷಿ ಯುವಕರು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲವೆಡೆ ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಇದರ ಬೆನ್ನಲ್ಲೇ ಭಾರತೀಯ ಎಲ್ಲ ಸೇನಾಪಡೆಗಳು ನೇಮಕಾತಿ ಪ್ರಕ್ರಿಯೆ ಘೋಷಣೆ ಮಾಡಿವೆ.
ಈ ಪ್ರಕಾರವಾಗಿ ಭಾರತೀಯ ವಾಯುಸೇನೆ ಮುಂದಿನ ವಾರದಿಂದ ನೇಮಕಾತಿ ಆರಂಭ ಮಾಡಲಿದ್ದರೆ, ಭೂಸೇನೆ ಹಾಗೂ ನೌಕಾಸೇನೆ ಕೂಡ ನೇಮಕಾತಿಯ ಘೋಷಣೆ ಮಾಡಿದೆ. ಭಾರತೀಯ ಭೂಸೇನೆ, ನೌಕಾಸೇನೆ ಹಾಗೂ ವಾಯುಸೇನೆಯ ಮುಖ್ಯಸ್ಥರು ಈಗಾಗಲೇ ಈ ಯೋಜನೆಯ ಕುರಿತಾಗಿ ಸಂತಸ ವ್ಯಕ್ತಪಡಿಸಿದ್ದಾರೆ. ಭಾರತೀಯ ವಾಯುಸೇನೆಯು ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್ ಚೌಧರಿ 'ಕಳೆದ ಎರಡು ವರ್ಷಗಳಿಂದ ಸೇನಾ ನೇಮಕಾತಿ ಪ್ರಕ್ರಿಯೆ ನಡೆದಿರಲಿಲ್ಲ. ಹೀಗಾಗಿ ಸರ್ಕಾರ ಅಗ್ನಿಪಥ್ ಯೋಜನೆಯ ಮೊದಲ ಅಗ್ನಿವೀರ್‌ಗಳ ವಯೋಮಿತಿಯನ್ನು 21 ರಿಂದ 23ಕ್ಕೆ ಏರಿಸಿದ್ದರಿಂದ ಖುಷಿಯಾಗಿದೆ' ಎಂದು ಹೇಳಿದ್ದಾರೆ. ಅಗ್ನಿಪಥ್ ಯೋಜನೆಯ ಅಡಿಯಲ್ಲಿ ಜೂನ್ 24 ರಿಂದ ವಾಯುಸೇನೆಯು ನೇಮಕಾತಿ ಪ್ರಕ್ರಿಯೆಯನ್ನೂ ಆರಂಭಿಸಲಿದೆ ಎಂದು ವಿಆರ್ ಚೌಧರಿ ಹೇಳಿದ್ದಾರೆ. ಅದರೊಂದಿಗೆ ಶುಕ್ರವಾರ ದೇಶದ ಆರು ಫಾರ್ವರ್ಡ್ ಬೇಸ್‌ಗಳಿಗೆ ಭೇಟಿ ನೀಡಲಿದ್ದು, ಅಲ್ಲಿ ಅವರು 'ಅಗ್ನಿಪಥ್' ಪ್ರವೇಶ ಯೋಜನೆಯ ವಿವರಗಳ ಬಗ್ಗೆ ಸೈನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. "ಸೇನಾಪಡೆಯ ಕೊನೆಯ ವ್ಯಕ್ತಿಗೆ ಕೂಡ ಯೋಜನೆಯ ವಿವರಗಳನ್ನು ತಿಳಿದಿರಬೇಕು ಎನ್ನುವುದು ಗುರಿಯಾಗಿದೆ" ಎಂದು ಅವರು ಹೇಳಿದ್ದಾರೆ.
ಭೂಸೇನೆಯು ಇನ್ನು ಎರಡು ದಿನಗಳಲ್ಲಿ ನೋಟಿಫಿಕೇಶನ್ಅನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದೆ ಎಂದು ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ತಿಳಿಸಿದ್ದಾರೆ. ವಲಯ ನೇಮಕಾತಿ ಕಚೇರಿಗಳು ಮತ್ತು ಎಆರ್‌ಓಗಳು ಖಾಲಿ ಹುದ್ದೆಗಳನ್ನು ಪಡೆಯುತ್ತವೆ ಎಂದು ತಿಳಿಸಿದ್ದಾರೆ "ಅಗ್ನಿವೀರ್‌ಗಳು ನೇಮಕಾತಿ ತರಬೇತಿ ಕೇಂದ್ರಗಳಿಗೆ ಹೋಗುವ ಪ್ರಶ್ನೆಗೆ ಸಂಬಂಧಿಸಿದಂತೆ, ಮೊದಲ ಅಗ್ನಿವೀರ್‌ಗಳ ತರಬೇತಿಯು ಈ ಡಿಸೆಂಬರ್‌ನಲ್ಲಿ (2022) ಕೇಂದ್ರಗಳಲ್ಲಿ ಪ್ರಾರಂಭವಾಗಲಿದೆ" ಎಂದು ಅವರು ಹೇಳಿದರು.
PublicNext
17/06/2022 07:18 pm