ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಳು ದಾಖಲೆ ನೀಡಿ ನೇಮಕಗೊಂಡಿದ್ದ 11 ಪ್ರೌಢ ಶಾಲೆ ಶಿಕ್ಷಕರ ಬಂಧನ

ಬೆಂಗಳೂರು: ರಾಜ್ಯ ಅಪರಾಧ ತನಿಖಾ ದಳ (ಸಿಐಡಿ)ಭರ್ಜರಿ ಕಾರ್ಯಚಾರಣೆ ನಡೆಸಿದ್ದು, 2014-15 ರಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ನಡೆದಿದೆ ಎನ್ನಲಾದ ಶಿಕ್ಷಕರ ನೇಮಕಾತಿ ಹಗರಣ ಸಂಬಂದ ಸುಳ್ಳು ದಾಖಲೆ ನೀಡಿ ನೇಮಕಗೊಂಡಿದ್ದ 11 ಮಂದಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕರನ್ನು ಮಂಗಳವಾರ ಬಂಧಿಸಿದೆ.

ಶಿಕ್ಷಕರ ನೇಮಕ ಹಗರಣ ಸಂಬಂಧ ಸಿಐಡಿ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಕುಣಿಗಲ್ ತಾಲೂಕಿನ ಕೊಡವೆತ್ತಿ ಪ್ರೌಢಶಾಲೆಯ ಸಹ ಶಿಕ್ಷಕಿ ರಾಜೇಶ್ವರಿ, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬೋರನ ಕಣಿವೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಶಮೀನಾಜ್ ಬಾನು, ತುರುವೆಕೆರೆ ತಾಲೂಕಿನ ಹುಲಿಕಲ್ ಪ್ರೌಢಶಾಲೆಯ ಶಿಕ್ಷಕ ಬಿ. ಎನ್. ನವೀನ್ ಹನುಮನಗೌಡ, ಹುಲಿಕೆರೆ ಪ್ರೌಢಶಾಲೆಯ ಬಿ.ಎಂ.ಪ್ರಸನ್ನ, ಹೊಳಗೇರಿಪುರ ಪ್ರೌಢಶಾಲೆಯ ಆರ್.ಹರೀಶ್, ನಾಗಸಂದ್ರ ಪ್ರೌಢಶಾಲೆಯ ನಾಗರತ್ನ, ಅಮೃತೂರು ಪ್ರೌಢಶಾಲೆಯ ಜಿ.ಎನ್. ನವೀನ್ ಕುಮಾರ್, ತಿಪಟೂರು ತಾಲೂಕಿನ ಅಲ್ದೂರಿನ ಪ್ರೌಢಶಾಲೆಯ ಶಿಕ್ಷಕಿ ಕಮಲಾ, ಗುಪ್ಪಿ ತಾಲೂಕಿನ ಕೆ. ಮತ್ತಿಘಟ್ಟ ಸರ್ಕಾರಿ ಕಂಪೋಸಿಟ್ ಪ್ರೌಢಶಾಲೆ ಎಸ್. ದೇವೇಂದ್ರ ನಾಯ್ಕ್ ಹಾಗೂ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಮಹೇಶ್ ಶೀಮಂತ ಸೂಸಲಾಡಿ ಎಂಬುವರನ್ನು ಸಿಐಡಿ ಬಂಧಿಸಿದೆ.

Edited By : Nagaraj Tulugeri
PublicNext

PublicNext

07/09/2022 07:46 am

Cinque Terre

109.7 K

Cinque Terre

7

ಸಂಬಂಧಿತ ಸುದ್ದಿ