ಗೋಕಾಕ : ಕೆಪಿಟಿಸಿಎಲ್ ಕಿರಿಯ ಸಹಾಯಕ ನೇಮಕಾತಿ ಪರೀಕ್ಷೆಯಲ್ಲಿ ಸ್ಮಾರ್ಟ್ ವಾಚ್ ಬಳಸಿ ಪರೀಕ್ಷೆಗೆ ಹಾಜರಾಗಿದ್ದ ಪರೀಕ್ಷಾರ್ಥಿ ಮೂಡಲಗಿ ತಾಲೂಕಿನ ಸಿದ್ದಪ್ಪ ಮದಿಹಳ್ಳಿ ಎಂಬಾತನನ್ನು ಬೆಳಗಾವಿಯ ವಿಶೇಷ ದಳದ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರು ಗ್ರಾಮದ ಸಿದ್ದಪ್ಪ ಮದಿಹಳ್ಳಿ(21) ಬಂಧಿತನಾಗಿದ್ದು, ರವಿವಾರ ದಿನಾಂಕ 7 ರಂದು ನಡೆದ ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆಯಲ್ಲಿ ನಗರದ ಜೆಎಸ್ ಎಸ್ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ ಸಿದ್ದಪ್ಪ ಎಂಬಾತನು ಸ್ಮಾರ್ಟ್ ವಾಚ್ ಬಳಸಿ ಪರೀಕ್ಷೆ ಬರೆದ್ದು ಅಕ್ರಮ ಎಸೆಗಿದ್ದಾನೆ ಎಂಬ ಆರೋಪದ ಮೇರೆಗೆ ಖಚಿತ ಮಾಹಿತಿ ಆಧರಿಸಿ ಜಾಡು ಹಿಡಿದು ತನಿಖೆ ಕೈಗೊಂಡ ಬೆಳಗಾವಿ ವಿಶೇಷ ದಳದ ಪೊಲೀಸರು ಬುಧವಾರದಂದು ಸಿದ್ದಪ್ಪ ಮದಿಹಳ್ಳಿ ಎಂಬಾತನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
ಸದ್ಯ ಸ್ಮಾರ್ಟ್ ವಾಚ್ ನೀಡಿ ಸಿದ್ದಪ್ಪನಿಗೆಶ ಪರೀಕ್ಷೆ ಬರೆಯಲು ಕಳಿಸಿದ್ದ ಆರೋಪಿಗಾಗಿ ಶೋಧ ಕಾರ್ಯವನ್ನು ಕೈಗೊಂಡಿದ್ದಾರೆ. ರವಿವಾರ ನಡೆದ ಪರೀಕ್ಷೆಯಲ್ಲಿ ಅಭ್ಯರ್ಥಿ ಸಿದ್ದಪ್ಪ ಮದಿಹಳ್ಳಿಗೆ ಸ್ವಾರ್ಟ್ ವಾಚ್ ಹಾಕಿಕೊಂಡು ಪರೀಕ್ಷೆಗೆ ಹಾಜರಾಗಿ ಸ್ಮಾರ್ಟ್ ವಾಚ್ ಮೂಲಕ ಪ್ರಶ್ನೆ ಪತ್ರಿಕೆ ಫೋಟೋ ತಗೆದು ಸ್ಮಾರ್ಟ್ ವಾಚ್ ನಿಂದ ವಾಟ್ಸಪ್ ಮೂಲಕ ಪ್ರಶ್ನೆ ಪತ್ರಿಕೆಯನ್ನು ರವಾನೆ ಮಾಡಿದ್ದ ಎನ್ನಲಾಗಿದ್ದು, ಗೋಕಾಕ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬೆಳಗಾವಿ ಪೊಲೀಸರು ಪ್ರತ್ಯೇಕ ಎರಡು ತಂಡಗಳೊಂದಿಗೆ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
PublicNext
10/08/2022 04:41 pm