ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

2 ತಿಂಗಳ ಬಳಿಕ ಕುಂದ್ರಾಗೆ ಬಿಡುಗಡೆ ಭಾಗ್ಯ

ಮುಂಬೈ: ನೀಲಿ ಸಿನಿಮಾ ನಿರ್ಮಾಣ ಹಾಗೂ ಆ್ಯಪ್ ಗಳ ಮೂಲಕ ಅವುಗಳ ಬಿಡುಗಡೆ ಆರೋಪದಡಿ ನಟಿ ಶಿಲ್ಪಾ ಶೆಟ್ಟಿ ಗಂಡ ರಾಜ್ ಕುಂದ್ರಾ ಅವರನ್ನು ಕಳೆದ ಜುಲೈ ತಿಂಗಳಿನಲ್ಲಿ ಮುಂಬೈ ಅಪರಾಧ ಇಲಾಖೆಯ ಪೊಲೀಸರು ಬಂಧಿಸಿದ್ದರು. ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು ಮುಂಬೈ ನ್ಯಾಯಾಲಯಕ್ಕೆ ಕುಂದ್ರಾ ವಿರುದ್ಧ ಇತ್ತೀಚಿಗಷ್ಟೆ 1500 ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ.

ಸದ್ಯ ಬಂಧಿತ ಉದ್ಯಮಿ ರಾಜ್ ಕುಂದ್ರಾ ಮಂಗಳವಾರ (ಸೆ.21) ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಕುಂದ್ರಾ ತಮ್ಮ ಬಂಧನದ ದಿನದಿಂದ ಜಾಮೀನು ಪಡೆಯಲು ಪ್ರಯತ್ನ ನಡೆಸಿದ್ದರು. ಕೊನೆಗೆ ಸೋಮವಾರ (ಸೆ.20) ಮುಂಬೈ ಕೋರ್ಟ್ 50,000 ಶ್ಯೂರಿಟಿಯೊಂದಿಗೆ ಬೇಲ್ ಮಂಜೂರು ಮಾಡಿತು. ಈ ಹಿನ್ನೆಲೆ ಎರಡು ತಿಂಗಳ ಬಳಿಕ ಮಂಗಳವಾರ ಮುಂಬೈ ಆರ್ಥರ್ ರಸ್ತೆಯಲ್ಲಿರುವ ಜೈಲಿನಿಂದ ಹೊರ ಬಂದರು.

Edited By : Nirmala Aralikatti
PublicNext

PublicNext

21/09/2021 01:45 pm

Cinque Terre

93.29 K

Cinque Terre

2