ಬೆಂಗಳೂರು: ಭಯೋತ್ಪಾದನಾ ಸಂಘಟನೆಗಳಿಗೆ ಹಣಕಾಸು ನೆರವು ನೀಡುತ್ತಿರುವ ಆರೋಪದ ಮೇಲೆ ಬೆಂಗಳೂರು ಸೇರಿ ದೇಶದಾದ್ಯಂತ 10 ಕಡೆ ಎನ್ ಐಎ ದಾಳಿ ನಡೆಸಲಾಗಿದೆ.
ಜಮ್ಮು ಕಾಶ್ಮೀರದ ಶ್ರೀನಗರ ಮತ್ತು ಬಂಡಿಪೋರ ಹಾಗೂ ಬೆಂಗಳೂರಲ್ಲಿ ಬುಧವಾರ ಎನ್ ಐಎ ದಾಳಿ ಮಾಡಿತ್ತು.
ಉಗ್ರ ಸಂಘಟನೆಗೆ ಭಾರತ ಮತ್ತು ವಿದೇಶಗಳಿಂದ ದೇಣಿಗೆ ರೂಪದಲ್ಲಿ ಹಣ ಸಂಗ್ರಹಣೆ ಮಾಡುತ್ತಿರುವ ಆರೋಪ ಕೇಳಿಬಂದಿತ್ತು.
ಎನ್ ಜಿಓ ಹೆಸರಿನಲ್ಲಿ ಉಗ್ರ ಸಂಘಟನೆಗೆ ಹಣ ಸಂಗ್ರಹಿಸಿದ ಬಗ್ಗೆ ಎನ್ ಐಎ ತಂಡ ದೂರು ದಾಖಲಿಸಿತ್ತು. ತನಿಖೆ ವೇಳೆ ಹಣ ಸಂಗ್ರಹದ ದಾಖಲೆಗಳು ಪತ್ತೆಯಾಗಿತ್ತು. ಆ ಹಣ ಸಂಗ್ರಹ ಮಾಡಿದ್ದವರ ಮನೆಗಳ ಮೇಲೆ ಎನ್ ಐಎ ದಾಳಿ ನಡೆಸಿತ್ತು.
ಜೆಕೆಸಿಸಿಎಸ್ (ಜಮ್ಮು ಕಾಶ್ಮೀರ್ ಕೋಯಿಲೇಷನ್ ಫಾರ್ ಸಿವಿಲ್ ಸೊಸೈಟಿ) ಕಚೇರಿ ಹಾಗೂ ಸದಸ್ಯರ ಮನೆ, ಹಾಗೂ ಜೆಕೆಸಿಸಿಎಸ್ ಮುಖ್ಯಸ್ಥ ಕುರಂ ಪರ್ವೇಜ್ ಶಿಷ್ಯರ ಮನೆ ಮೇಲೆ ದಾಳಿ ನಡೆಸಲಾಗಿದೆ.
ಬೆಂಗಳೂರಿನ ಸ್ವಾತಿ ಶೇಷಾದ್ರಿ ಸಹ ಕುರಂ ಪರ್ವೇಜ್ ನ ಶಿಷ್ಯೆ ಎನ್ನಲಾಗಿದೆ.
ಅವರ ಮನೆಯಲ್ಲಿ ನಿನ್ನೆ ಇಡೀ ದಿನ ಸರ್ಚ್ ಮಾಡಿರುವ ಎನ್ಐಎ ತಂಡ ಸದ್ಯ ಮನೆಯಲ್ಲಿ ಅಕ್ರಮ ಹಣ ಬಂದಿರುವ ದಾಖಲೆಗಳ ಸೀಜ್ ಮಾಡಿದೆ. ಜೊತೆ ಕೆಲ ಎಲೆಕ್ಟ್ರಾನಿಕ್ ಡಿವೈಸ್ ಮತ್ತು ಡಿಜಿಟಲ್ ಸಾಕ್ಷಿಗಳನ್ನು ವಶಕ್ಕೆ ಪಡೆಯಲಾಗಿದೆ.
PublicNext
29/10/2020 11:59 am