ಬೆಂಗಳೂರು: ನ್ಯಾಯಾಧೀಶರಿಗೆ ಹುಸಿ ಬಾಂಬ್ ಪತ್ರ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು ಆಸ್ತಿ ವಿಚಾರಕ್ಕಾಗಿ ಜಡ್ಜ್ ಹೆಸರಿನಲ್ಲಿ ಬೆದರಿಕೆ ಪತ್ರ ಬರೆದಿದ್ದಾರೆ ಎಂದು ನಗರ ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ತಿಳಿಸಿದ್ದಾರೆ
ಕೋರ್ಟ್ ಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕೇಂದ್ರ ವಿಭಾಗ ಡಿಸಿಪಿ ಅನುಚೇತ್ ಬಾಂಬ್ ಬೆದರಿಕೆವೊಂದನ್ನಾ ಜಡ್ಜ್ ಹೆಸರಿಗೆ ಪೋಸ್ಟ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ತನಿಖೆ ವೇಳೆ ತಿಪಟೂರು ಮೂಲದ ರಾಜಶೇಖರ್ ತಾನೇ ಪೋಸ್ಟ್ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಹೇಳಿದರು.
ಅಲ್ಲದೇ ಆಸ್ತಿ ವಿವಾದಕ್ಕಾಗಿ ಈ ರೀತಿ ಮಾಡಿದ್ದಾನೆ. ಆತನ ವಿರುದ್ಧ ಮೂರು ಪ್ರಕರಣಗಳಿವೆ. ರಾಜಶೇಖರ್ ಒಬ್ಬರನ್ನ ದಸ್ತಗಿರಿ ಮಾಡಿ ಹೆಚ್ವಿನ ತನಿಖೆ ಮಾಡಲಾಗ್ತಿದೆ ಎಂದು ತಿಳಿಸಿದ್ದಾರೆ.
PublicNext
21/10/2020 07:49 am