ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಷ್ಯಾ ಶಾಲೆಯಲ್ಲಿ ಗುಂಡಿನ ದಾಳಿ : ಮಕ್ಕಳು ಸೇರಿ 6 ಮಂದಿ ಸಾವು ವಿಡಿಯೋ

ಮಾಸ್ಕೋ : ಮಧ್ಯ ರಷ್ಯಾದಲ್ಲಿನ ಶಾಲೆಯೊಂದರಲ್ಲಿ ಸೋಮವಾರ ಬೆಳಗ್ಗೆ ಬಂದೂಕುಧಾರಿಯೊಬ್ಬ 6 ಜನರನ್ನು ಕೊಂದಿದ್ದಾನೆ. ಈ ವೇಳೆ ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಹೌದು ರಷ್ಯಾದ ಇಝೆವ್ಸ್ಕ್ ಸಿಟಿಯಲ್ಲಿ ಗನ್ ಮ್ಯಾನ್ ಒಬ್ಬ ಹೀಗೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಮೃತಪಟ್ಟವರಲ್ಲಿ ಬಹುತೇಕ ಮಕ್ಕಳೇ ಆಗಿದ್ದಾರೆ ಎನ್ನಲಾಗಿದೆ.

ಇನ್ನು ಮನಬಂದಂತೆ ಗುಂಡಿನ ದಾಳಿ ನಡೆಸಿದ ಗನ್ ಮ್ಯಾನ್, ಕೊನೆಗೆ ತನ್ನನ್ನೇ ತಾನು ಶೂಟ್ ಮಾಡಿಕೊಂಡು ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ವಿಚಾರ ಗೊತ್ತಾಗುತ್ತಿದ್ದಂತೆಯೇ, ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಪರಿಚಿತ ವ್ಯಕ್ತಿಯೊಬ್ಬ ಶಾಲಾ ಆವರಣಕ್ಕೆ ನುಗ್ಗಿ ಮೊದಲು ಸೆಕ್ಯೂರಿಟಿ ಗಾರ್ಡ್ ಕೊಲೆ ಮಾಡಿ ನಂತರ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ್ದಾನೆ ಎಂದು ಉಡ್ಮುರ್ಟಿಯಾ ಪ್ರಾಂತ್ಯದ ಗವರ್ನರ್ ಅಲೆಕ್ಸಂಡರ್ ಮಾಹಿತಿ ನೀಡಿದ್ದಾರೆ.

Edited By : Nirmala Aralikatti
PublicNext

PublicNext

26/09/2022 04:13 pm

Cinque Terre

118.67 K

Cinque Terre

3