ನಿಂಗ್‌ಬೋ: ಟ್ರಾಫಿಕ್ ಸಿಗ್ನಲ್‌ನಲ್ಲಿ ಚಲಿಸುತ್ತಿದ್ದ ಕಾರ್‌ನ ಕಿಟಕಿಯಿಂದ ಮಗು ನಡುರಸ್ತೆಗೆ ಬಿದ್ದಿದೆ. ಇದನ್ನು ಗಮನಿಸಿದೇ ಚಾಲಕ ಅಲ್ಲಿಂದ ಮುಂದೆ ಸಾಗಿದ್ದಾನೆ.
ಚೀನಾದ ನಿಂಗ್‌ಬೋ ನಗರದಲ್ಲಿ ಈ ಘಟನೆ ನಡೆದಿದೆ. ಮಗು ಬಿದ್ದಿದ್ದನ್ನು ಗಮನಿಸಿದ ಸಾರ್ವಜನಿಕರು ಕೂಡಲೇ ಧಾವಿಸಿ ರಕ್ಷಿಸಿದ್ದಾರೆ. ಕಾರಿನಿಂದ ಬಿದ್ದ ಪರಿಣಾಮ ಮಗುವಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು ನೋಡಿದ ನೆಟ್ಟಿಗರು ಕಾರು ಚಾಲಕನಿಗೆ ಅಷ್ಟೂ ಪರಿಜ್ಞಾನ ಇಲ್ಲವಾ? ಎಂದು ಪ್ರಶ್ನಿಸುತ್ತಿದ್ದಾರೆ.
PublicNext
04/08/2022 05:06 pm