ಬೆಂಗಳೂರು: ಅಲ್ ಖೈದಾ ಉಗ್ರ ಸಂಘಟನೆ ನಾಯಕ ಅಯ್ಯಾನ್ ಜವಾಹಿರಿ ಬೆಂಕಿ ಹಚ್ಚಿ ಆಗಿದೆ. ತಣ್ಣಗಾಗುತ್ತಿದ್ದ ಹಿಜಾಬ್ ವಿವಾದಕ್ಕೆ ತುಪ್ಪ ಸುರಿವಿದ್ದಾನೆ. ಆದರೆ ಇನ್ನೂ ಓದುತ್ತಿರೋ ಮಂಡ್ಯದ ವಿದ್ಯಾರ್ಥಿ ಮಸ್ಕಾನ್ ಖಾನ್ ಹೇಳಿದ್ದ ಆ ಒಂದೇ ಒಂದು ಮಾತಿನಿಂದ ಪ್ರಭಾವಿತನಾಗಿ ಆಕೆ ಮೇಲೆ ಒಂದು ಕವಿತೆನೆ ಬರೆದು ಬಿಟ್ಟಿದ್ದಾನೆ.
ಮೋಸ್ಟ್ ವಾಂಟೆಡ್ ಟೆರರ್ ಅಯ್ಯಾನ್ ಜವಾಹಿರಿ, ಮಂಡ್ಯದ ಹುಡುಗಿಯನ್ನ ಹಾಡಿ-ಹೊಗಳಿದ್ದಾನೆ. ಹಿಜಾಬ್ ಸಮಯದಲ್ಲಿ ಅಲ್ಲಾಹು ಅಕ್ಬರ್ ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದ್ದ ಈಕೆಯ ದಿಟ್ಟತನವನ್ನ ಮೆಚ್ಚಿಕೊಂಡಾಡಿದ್ದಾನೆ.
ಅಷ್ಟೇ ಅಲ್ಲ, ದಿ ನೋಬೆಲ್ ವುಮೆನ್ ಆಫ್ ಇಂಡಿಯಾ ಎಂಬ ಶೀರ್ಷಿಕೆಯ ವೀಡಿಯೋದಲ್ಲಿ ಮುಸ್ಕಾನ್ ಖಾನ್ ಬಗ್ಗೆ ಒಂದು ಕವನವನ್ನೇ ಬರೆದಿದ್ದಾನೆ. ಅದನ್ನ ಮುಸ್ಕಾನ್‌ಗೂ ಅರ್ಪಿಸಿ ಬಿಟ್ಟಿದ್ದಾನೆ.
ಈ ಒಂದು ವೀಡಿಯೋದಲ್ಲಿ ಮುಸ್ಕಾನ್ ಅನ್ನ ಸಹೋದರಿ ಎಂದೇ ಹೇಳಿಕೊಂಡಿದ್ದಾನೆ.ಜೊತೆಗೆ ಈಕೆ ಅಲ್ಲಾಹು ಅಕ್ಬರ್ ಎಂದು ಕರೆದಿದ್ದಕ್ಕೆ ಪ್ರಭಾವಿತನಾಗಿದ್ದೇನೆ ಅಂತಲೂ ಹೇಳಿದ್ದಾನೆ. ಆದರೆ, ಈ ಉಗ್ರ ಇಲ್ಲಿ ಬಳಸಿರೋ ಭಾಷೆ ಹಿಂದಿನೂ ಅಲ್ಲ. ಉರ್ದುನೂ ಅಲ್ಲ. ಇಂಗ್ಲೀಷ್ ಅಲ್ಲವೇ ಅಲ್ಲ. ಅದು ಅರಬ್ಬಿ ಭಾಷೆನೆ ಆಗಿದೆ.
PublicNext
07/04/2022 07:16 am