ಕಾಬೂಲ್: ಅಫ್ಘಾನಿಸ್ತಾನದ ಅಧಿಕಾರದ ಚುಕ್ಕಾಣಿ ಹಿಡಿದ ತಾಲಿಬಾನಿಗಳು ತಮ್ಮ ಪಾಳೆಗಾರಿಕೆಯ ಅಟ್ಟಹಾಸ ತೋರುತ್ತಿದ್ದಾರೆ.
ಈಗ ಮತ್ತೊಂದು ರೂಲ್ಸ್ ಮಾಡಿರುವ ತಾಲಿಬಾನಿಗಳು ಬಟ್ಟೆ ಅಂಗಡಿಗಳಲ್ಲಿ ಗೊಂಬೆಗಳಿಗೆ ಬಟ್ಟೆ ಹಾಕಿ ಪ್ರದರ್ಶಿಸುವಂತಿಲ್ಲ ಎಂದು ಫರ್ಮಾನು ಹೊರಡಿಸಿದ್ದಾರೆ. ಹಾಗಾಗಿ ಇನ್ಮುಂದೆ ಮಾಡೆಲ್‌ಗಳ ರೀತಿ ಬಟ್ಟೆ ಅಂಗಡಿಗಳಲ್ಲಿ ಗೊಂಬೆ ಇಡುವಂತಿಲ್ಲ. ಇಟ್ಟರೆ ಏನಾಗುತ್ತದೆ ಎಂಬುದಕ್ಕೆ ನಿದರ್ಶನ ಎಂಬಂತೆ ಈ ವಿಡಿಯೋವನ್ನು ತಾಲಿಬಾನಿಗಳು ಹರಿಬಿಟ್ಟಿದ್ದಾರೆ. ಅಂಗಡಿಯೊಂದಕ್ಕೆ ನುಗ್ಗಿದ ತಾಲಿಬಾನಿಗಳು ಅಲ್ಲಿದ್ದ ಗೊಂಬೆಗಳ ರುಂಡಗಳನ್ನು ಕತ್ತರಿಸಿ ವಿಕೃತಿ ತೋರಿದ್ದಾರೆ. ಈ ರೀತಿ ಗೊಂಬೆ ಪ್ರದರ್ಶಿಸಿದ್ದು ತಾಲಿಬಾನಿಗಳ ಪ್ರಕಾರ 'ಶಹಿರಾ' ಕಾನೂನಿಗೆ ವಿರುದ್ಧವಂತೆ
PublicNext
05/01/2022 08:24 am