ರೋಮ್: ಲಿಬಿಯಾದ ಉತ್ತರದಲ್ಲಿರುವ ಮೆಡಿಟರೇನಿಯನ್ ಸಮುದ್ರದಲ್ಲಿ ದೋಣಿ ಮುಳುಗಿ 75 ಮಂದಿ ವಲಸಿಗರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ಮಾಹಿತಿ ನೀಡಿದೆ.
15 ಮಂದಿಯನ್ನು ಮೀನುಗಾರರಿಂದ ರಕ್ಷಿಸಲ್ಪಟ್ಟಿದ್ದು, ಅವರನ್ನು ವಾಯುವ್ಯ ಲಿಬಿಯಾದ ಜುವಾರಾ ಬಂದರಿಗೆ ಬಂದು ದುರ್ಘಟನೆಯ ಮಾಹಿತಿ ನೀಡಿದ್ದಾರೆ.
ಕೋಸ್ಟ್‌ಗಾರ್ಡ್ ಹೇಳಿಕೆಯ ಪ್ರಕಾರ, 70 ಜನರನ್ನು ಒಂದು ದೋಣಿಯಲ್ಲಿ ಇಟಾಲಿಯನ್ ದ್ವೀಪ ಲ್ಯಾಂಪುಡುಸಾಗೆ ಕರೆತರಲಾಗಿದೆ. ಸಮುದ್ರದಲ್ಲಿನ ಪ್ರತಿಕೂಲ ಹವಾಮಾನ ಮತ್ತು ಹಡಗಿನಲ್ಲಿ ಹೆಚ್ಚಿನ ಸಂಖ್ಯೆಯ ಜನರು ಪ್ರಯಾಣಿಸುತ್ತಿದ್ದ ಕಾರಣ ಈ ದುರ್ಘಟನೆ ಘಟಿಸಿದೆ ಎನ್ನಲಾಗಿದೆ.
PublicNext
21/11/2021 09:18 am