ಕಾಬೂಲ್: ದಕ್ಷಿಣ ಅಫ್ಘಾನಿಸ್ತಾನದ ಕಂದಹಾರ್ ನಗರದಲ್ಲಿರುವ ಶಿಯಾ ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನೆ ಸಂದರ್ಭದಲ್ಲೇ ಸ್ಫೋಟ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಕನಿಷ್ಠ 32 ಮಂದಿ ಮೃತಪಟ್ಟಿದ್ದು, 53 ಮಂದಿ ಜನ ಗಾಯಗೊಂಡಿದ್ದಾರೆ.
ಮೂರು ಕಡೆ ಸ್ಫೋಟ ಸಂಭವಿಸಿದೆ. ಮಸೀದಿಯ ಮುಖ್ಯದ್ವಾರ, ದಕ್ಷಿಣ ಭಾಗ ಮತ್ತು ಪ್ರಾರ್ಥನೆಗೆ ಹಾಜರಾಗುವುದಕ್ಕೂ ಮುನ್ನ ಜನರು ಮುಖ ತೊಳೆಯುವ ಜಾಗದಲ್ಲಿ ಸ್ಫೋಟ ಸಂಭವಿಸಿದೆ. ಆದರೆ ಸ್ಫೋಟಕ್ಕೆ ಕಾರಣವೇನೆಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಕಳೆದ ವಾರವೂ ಕುಂಡುಜ್ನ ಶಿಯಾ ಮಸೀದಿಯಲ್ಲಿ ಬಾಂಬ್ ಸ್ಫೋಟಗೊಂಡು ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಕಳೆದ ವಾರ ಶುಕ್ರವಾರದ ದಿನದಂದು ಪ್ರಾರ್ಥನೆಗೆ ನೂರಾರು ಮಂದಿ ಮಸೀದಿಗೆ ತೆರಳಿದ್ದ ವೇಳೆ ದುರಂತ ನಡೆದಿತ್ತು. ಇಂದೂ ಸಹ ಶುಕ್ರವಾರದಂದೇ ಪ್ರಾರ್ಥನೆ ಸಲ್ಲಿಸುವ ವೇಳೆ ಬಾಂಬ್ ಸ್ಫೋಟಗೊಂಡಿದೆ ಎನ್ನಲಾಗಿದೆ.
PublicNext
15/10/2021 05:26 pm