ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಾಲಿಬಾನಿಗಳ ಕ್ರೌರ್ಯ: ಕುಟುಂಬಸ್ಥರ ಮುಂದೆಯೇ ಗರ್ಭಿಣಿ ಪೊಲೀಸ್‌ ಬರ್ಬರ ಹತ್ಯೆ.!

ಕಾಬೂಲ್​: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ, ಕ್ರೌರ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉಗ್ರರು 8 ತಿಂಗಳ ಗರ್ಭಿಣಿಯಾಗಿರುವ ಪೊಲೀಸ್​ ಅನ್ನು ಕುಟುಂಬಸ್ಥರ ಮುಂದೆಯೇ ಅಮಾನವೀಯವಾಗಿ ಹತ್ಯೆಗೈದಿದ್ದಾರೆ.

ಬಾನು ನೆಗರ್​ ಮೃತ ಪೊಲೀಸ್‌ ಎಂದು ಗುರುತಿಸಲಾಗಿದೆ. ಘೋರ್​ ಪ್ರಾಂತ್ಯದ ರಾಜಧಾನಿ ಫಿರೋಜ್ಕೋಹ್​ನಲ್ಲಿರುವ ಬಾನು ನೆಗರ್ ಅವರ ಮನೆಗೆ ಮೂವರು ಬಂದೂಕುಧಾರಿಗಳು ಶನಿವಾರ ನುಗ್ಗಿದ್ದಾರೆ. ಬಳಿಕ ಮನೆಯಲ್ಲಿದ್ದವರನ್ನೆಲ್ಲಾ ಕಟ್ಟಿಹಾಕಿ, ಆಕೆಯನ್ನು ಗುಂಡು ಹಾರಿಸಿ ಕೊಲೆಗೈದಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ತಾಲಿಬಾನ್​, ಈ ಹತ್ಯೆಗೂ ನಮಗೂ ಸಂಬಂಧವಿಲ್ಲ. ಈ ಪ್ರಕರಣದಲ್ಲಿ ನಾವು ಭಾಗಿಯಾಗಿಲ್ಲ, ತನಿಖೆ ನಡೆಸುತ್ತಿದ್ದೇವೆ ಎಂದಿದೆ.

Edited By : Vijay Kumar
PublicNext

PublicNext

06/09/2021 08:51 am

Cinque Terre

423.95 K

Cinque Terre

13

ಸಂಬಂಧಿತ ಸುದ್ದಿ