ಬ್ರಾಸಿಲಿಯಾ: ಸಾಮಾಜಿಕ ಜಾಲತಾಣಗಳಿಂದ ಉಪಯೋಗ ಪಡೆದುಕೊಳ್ಳುವುದಕ್ಕಿಂತಲೂ ದುರುಪಯೋಗ ಮಾಡಿಕೊಳ್ಳುವವರೇ ಹೆಚ್ಚಾಗಿದ್ದಾರೆ. ಈ ಟಿಕ್ ಟಾಕ್ ಸೀಜನ್ ನಲ್ಲಿ ನಿಜಕ್ಕೂ ಕಂಡರಿಯದ ಕೆಲ ಪ್ರತಿಭೆಗಳು ಮುನ್ನಲೆಗೆ ಬಂದ್ರೆ ಕೆಲ ಕೆಟ್ಟ ಮನಸ್ಥಿತಿಯ ಜನರ ಪರಿಚಯವೂ ಆಗಿದೆ.
ಹೀಗೆ ಟಿಕ್ ಟಾಕ್ ನಲ್ಲಿ ಅರೆಬೆತ್ತಲೆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದ ಬ್ರೆಜಿಲ್ ಪ್ರಭಾವಿ ಮಹಿಳೆಯೊಬ್ಬಳು ತನ್ನ ಗಂಡನಿಂದಲೇ ಬರ್ಬರವಾಗಿ ಹತ್ಯೆಯಾಗಿದ್ದಾಳೆ. ಪತಿರಾಯ ತನ್ನ ಪತ್ನಿಯ ಮೇಲೆ 14 ಬಾರಿ ಗುಂಡು ಹಾರಿಸಿ ತಾನು ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಎಲಿಯಾನೆ ಫೆರೆರಾ ಸಿಯೋಲಿನ್ (35) ಎಂಬಾಕೆ ತನ್ನ ಪತಿ ಅಲೆಜಾಂಡ್ರೊ ಆಂಟೋನಿಯೊ ಅಗುಲೆರಾ ಕ್ಯಾಂಟಲ್ಲುಪಿ ಇಂದ ಹತ್ಯೆಯಾಗಿದ್ದಾಳೆ. ಜನವರಿ 24ರಂದು 6 ವರ್ಷದ ಮಗಳ ಮುಂದೆಯೇ ಈ ದುರ್ಘಟನೆ ನಡೆದಿದೆ. ತಂದೆ-ತಾಯಿಯ ದುರಂತ ಸಾವಿನ ಬಳಿಕ ಮಗಳನ್ನು ಸಂಬಂಧಿಕರು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ.
ಎಲಿಯಾನೆ ಫೆರೆರಾಳ ಟಿಕ್ ಟಾಕ್ ವಿಡಿಯೋ ಸಬಂಧ ಇಬ್ಬರ ನಡುವೆ ಮನೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜಗಳ ನಡೆದಿತ್ತು ಎನ್ನಲಾಗಿದೆ. ಎಲಿಯಾನೆ ಫೆರೆರಾ ಟಿಕ್ ಟಾಕ್ ಪೇಜ್ ನಲ್ಲಿ ಬರೋಬ್ಬರಿ 58 ಸಾವಿರ ಫಾಲೋವರ್ಸ್ ಹೊಂದಿದ್ದಳು. ಬಹುತೇಕ ವಿಡಿಯೋದಲ್ಲಿ ತುಂಡುಡುಗೆಯಲ್ಲಿ ಅರೆಬೆತ್ತಲೇಯಾಗೇ ಕಾಣಿಸಿಕೊಳ್ಳುತ್ತಿದ್ದಳು. ಇದೇ ವಿಚಾರ ಇಬ್ಬರ ನಡುವಿನ ಕಿತ್ತಾಟಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಸದ್ಯ ಪ್ರಕರಣ ದಾಖಲಾಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
PublicNext
28/01/2021 10:39 am