ಇಸ್ಲಾಮಾಬಾದ್: 17 ಹಾಗೂ 15 ವರ್ಷದ ಇಬ್ಬರು ಸಹೋದರಿಯರಿಗೆ ಡ್ರಗ್ಸ್ ನೀಡಿ 15 ಜನ ಕಾಮುಕರು ಅನೇಕ ದಿನಗಳಿಂದ ನಿರಂತರ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಸಂತ್ರಸ್ತೆಯರು ಫೈಸಲಾಬಾದ್ ಮೂಲದವರು ಎನ್ನಲಾಗಿದೆ. ಕಾಮುಕರು ಅಪ್ರಾಪ್ತೆಯರನ್ನು ಅಪಹರಿಸಿ ಜಾಂಗ್ ನಗರದ ಹೋಟೆಲ್‌ವೊಂದರಲ್ಲಿ ಕೂಡಿಟ್ಟಿದ್ದರು. ಈ ವೇಳೆ ಅವರಿಗೆ ಡ್ರಗ್ಸ್ ನೀಡಿದ ಕಾಮುಕರು ನಿರಂತರವಾಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೆ ಅಪ್ರಾಪ್ತೆಯರ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಮೊಬೈಲ್, ಕ್ಯಾಮೆರಾಗಳಲ್ಲಿ ಸೆರೆ ಹಿಡಿದು ವಿಕೃತಿ ಮೆರೆದಿದ್ದಾರೆ.
PublicNext
27/10/2020 03:22 pm