ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ನಡು ರಸ್ತೆಯಲ್ಲೇ ಲಾಂಗು ಮಚ್ಚು ಹಿಡಿದು ಯುವಕರ ಪುಂಡಾಟ

ತುಮಕೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದನ್ನು ಪ್ರಶ್ನಿಸಲು ಹೋದವರ ಮೇಲೆಯೇ ಪುಂಡರ ಗುಂಪು ನಡು ರಸ್ತೆಯಲ್ಲಿಯೇ ಡ್ರಾಗರ್ ದೊಣ್ಣೆ ಬಾಟಲ್‌ಗಳನ್ನು ಹಿಡಿದು ಹಲ್ಲೆ ಮಾಡಲು ಮುಂದಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ತುಮಕೂರು ನಗರದ ರಿಂಗ್ ರಸ್ತೆಯ ಕ್ಲೌಡ್ ನೈನ್ ಬಾರ್ ಮುಂದೆ ಭಾನುವಾರ ರಾತ್ರಿ ಗಲಾಟೆಯಾಗಿದ್ದು ಮರಳೂರು ದಿಣ್ಣೆ ಮೂಲದ ಯುವಕರು ವ್ಯಕ್ತಿಯೊಬ್ಬನಿಗೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ್ದರು. ಅದನ್ನ ಪ್ರಶ್ನಿಸಲು ಹೋದ ಮತ್ತೊಂದು ಯುವಕರ ಗುಂಪು ಹಲ್ಲೆ ಮಾಡಿದ ಯುವಕರನ್ನು ಹಿಡಿದು ಪ್ರಶ್ನಿಸಿದಾಗ ಮಾತಿಗೆ ಮಾತು ಬೆಳೆದು ಎರಡೂ ಗುಂಪು ನಡುವೆ ಗಲಾಟೆ ನಡೆದು ನಡು ರಸ್ತೆಯಲ್ಲಿಯೇ ಡ್ರಾಗರ್ ದೊಣ್ಣೆ ಹಾಗೂ ಬಾಟಲ್‌ಗಳನ್ನು ಹಿಡಿದು ಹಲ್ಲೆಗೆ ಮುಂದಾಗಿದ್ದರು, ಇದನ್ನು ಕಂಡ ಸಾರ್ವಜನಿಕರು ಕೆಲಕಾಲ ಆತಂಕಕ್ಕೆ ಒಳಗಾದರು.

ವಿಚಾರ ತಿಳಿದ ತಕ್ಷಣ ಸ್ತಳಕ್ಕೆ ಧಾವಿಸಿದ ತಿಲಕ್ ಪಾರ್ಕ್ ಠಾಣೆ ಪೋಲೀಸರಿಂದ ಮುಂದಾಗಬಹುದಾದ ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಇನ್ನು ನಡುರಸ್ತೆಯಲ್ಲಿಯೇ ಡ್ರ್ಯಾಗರ್ ದೊಣ್ಣೆಯನ್ನು ಹಿಡಿದ ಯುವಕರ ಪುಂಡಾಟವನ್ನು ಸಾರ್ವಜನಿಕರು ಕಂಡು ಭಯಭೀತರಾಗಿದ್ದಾರೆ. ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Edited By : Somashekar
PublicNext

PublicNext

01/08/2022 08:21 pm

Cinque Terre

51.67 K

Cinque Terre

1

ಸಂಬಂಧಿತ ಸುದ್ದಿ