ರಾಯಚೂರು: ಇಲ್ಲಿನ ಸಹಾಯಕ ಕೃಷಿ ನಿರ್ದೇಶಕಿಯ ಅಧಿಕಾರದ ದರ್ಪಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸುಸ್ತು ಹೊಡೆದಿದ್ದಾರೆ. ಅಧಿಕಾರಿಯ ದರ್ಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ.
ಸಿಂಧನೂರು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕಿ ಪ್ರಿಯಾಂಕಾ ಎಸ್ ಅವರ ಶಿಷ್ಟಾಚಾರಕ್ಕೆ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೇಸತ್ತಿದ್ದಾರೆ. ಕಚೇರಿ ಎಂಟ್ರಿಯಿಂದಲೇ ಪ್ರಿಯಾಂಕಾ ಅವರ ಶಿಷ್ಟಾಚಾರಗಳು ಶುರುವಾಗುತ್ತದೆ. ಇಡೀ ದಿನ ಅವರ ಶಿಷ್ಟಾಚಾರ ಪಾಲಿಸಲು ಆಗದೇ ಸಿಬ್ಬಂದಿ ಹೈರಾಣಾಗಿದ್ದಾರೆ. ಕಚೇರಿ ಗೇಟ್ನಲ್ಲಿ ಹಾರ್ನ್ ಹಾಕಿ ತಮ್ಮ ಹಾಜರಿಯನ್ನು ಪ್ರಿಯಾಂಕಾ ಖಾತ್ರಿ ಪಡಿಸಿಕೊಳ್ಳತ್ತಾರೆ. ಹಾರ್ನ್ ಕೇಳಿದ ತಕ್ಷಣವೇ ಗುಮಾಸ್ತ ಹಾಗೂ ಸಿಬ್ಬಂದಿ ಕಾರಿನ ಬಾಗಿಲು ತೆರೆಯಲೇಬೇಕು.
ಒಂದು ವೇಳೆ ಬಾಗಿಲು ತೆರೆಯುವಲ್ಲಿ ತಡವಾದರೆ, ಮೇಡಂ ಸ್ಥಳದಲ್ಲೇ ಆವಾಜ್ ಹಾಕುತ್ತಾರೆ ಎಂಬ ಆರೋಪ ಪ್ರಿಯಾಂಕಾ ವಿರುದ್ಧ ಕೇಳಿಬಂದಿದೆ. ಡೋರ್ ತೆಗೆಯೋವರೆಗೂ ಪ್ರಿಯಾಂಕಾ ಕೆಳಗೆ ಇಳಿಯೋದಿಲ್ಲವಂತೆ. ದಿನನಿತ್ಯ ಕೃಷಿ ಇಲಾಖೆಯಲ್ಲಿ ಈ ನಿಯಮವನ್ನು ಪ್ರಿಯಾಂಕಾ ಅವರು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದ್ದರಂತೆ. ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ತೋರದ ದರ್ಪವನ್ನು ಈ ಮೇಡಂ ಮಾತ್ರ ತೋರುತ್ತಿದ್ದಾರೆ ಎಂಬುದು ಹಲವರ ಆರೋಪವಾಗಿದೆ.
ಕೃಷಿ ಇಲಾಖೆಯಲ್ಲಿ ದರ್ಪ ಮೇರೆಯುವ ಹಾರ್ನ್ ಲೇಡಿ ಪ್ರಿಯಾಂಕಾ ಎಸ್, ಈ ಹಿಂದೆ ದೇವದುರ್ಗ ತಾಲೂಕಿನಲ್ಲಿದ್ದಾಗಲೂ ಇದೇ ಶಿಷ್ಟಾಚಾರ ಪಾಲಿಸುತ್ತಿದ್ದರಂತೆ. ಪ್ರಿಯಾಂಕಾ ಅವರ ದರ್ಪಕ್ಕೆ ಡ್ರೈವರ್, ಪಿವನ್ಗಳು ಸುಸ್ತೋ ಸುಸ್ತು ಎನ್ನುವಂತಾಗಿದೆ. ಸದ್ಯ ಪ್ರಿಯಾಂಕ ಮೇಡಂ ದರ್ಪದ ವಿಡಿಯೋ ವೈರಲ್ ಆಗಿದೆ.
PublicNext
26/08/2022 02:03 pm