ಕೋಲಾರ: ಹುಷಾರಿಲ್ಲ ಎಂದು ನೆಪವೊಡ್ಡಿ ಮೂರು ದಿನಗಳ ರಜೆ ಪಡೆದಿದ್ದ ಕೋಲಾರ ಜಿಲ್ಲೆಯ ಸೈಬರ್ ಕ್ರೈಂ ಇನ್ಸ್ಪೆಕ್ಟರ್ ಆಂಜಿನಪ್ಪ ರಾಜಸ್ಥಾನಕ್ಕೆ ತೆರಳಿ ಜೂಜು ಅಡ್ಡೆಯಲ್ಲಿ ಸಿಕ್ಕಿಬಿದ್ದು ಜೈಲು ಸೇರಿದ್ದಾರೆ.
ಇನ್‌ಸ್ಪೆಕ್ಟರ್ ಆಂಜಿನಪ್ಪ ಜೊತೆ ಕೋಲಾರ ನಗರದ ಟೊಮೆಟೋ ವ್ಯಾಪಾರಿ ಸುಧಾಕರ್, ಕೋಲಾರ ನಗರಸಭೆಯ ನಾಮ ನಿರ್ದೇಶಿತ ಸದಸ್ಯ ಸತೀಶ್, ಸಬ್ ರಿಜಿಸ್ಟ್ರಾರ್ ಶ್ರೀನಾಥ್, ಸರ್ಕಾರಿ ಕಾಲೇಜಿನ ಉಪನ್ಯಾಸಕ ರಮೇಶ, ಅರ್‌ಟಿಓ ಸಿಬ್ಬಂದಿ ಶಭರೀಶ್, ತಹಶೀಲ್ದಾರ್ ಮಂಜುನಾಥ್ ಸೇರಿದಂತೆ ಒಟ್ಟು ಏಳು ಜನರು ಬಂಧನವಾಗಿದ್ದಾರೆ.
ಮೂರು ದಿನ ರಜೆ ಪಡೆದು ರಾಜಸ್ಥಾನಕ್ಕೆ ತೆರಳಿದ್ದ ಆಂಜಿನಪ್ಪ ತಮ್ಮ ಪಟಾಲಂ ಜತೆ ಹೋಟೆಲ್‌ನಲ್ಲಿ ನಡೆಯುತ್ತಿದ್ದ ಇಸ್ಪೀಟ್ ದಂಧೆಯಲ್ಲಿ ಅಂದರ್ ಬಾಹರ್ ಅಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಜೈಪುರದ ಜೈಸಿಂಗೇಪುರ ಖೋರ್ ಪೊಲೀಸರು ಸಾಯಿಪುರ್ ಬಾಗ್ ಹೋಟೆಲ್ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಜೂಜಾಟ ಅಡುತ್ತಿದ್ದ 84 ಮಂದಿಯನ್ನು ಬಂಧಿಸಿದ್ದಾರೆ.
ಇನ್ನು ಮೂರು ದಿನಗಳ ಕಾಲ ಇನ್ಸ್ಪೆಕ್ಟರ್ ಆಂಜಿನಪ್ಪ ರಜೆ ಪಡೆದುಕೊಂಡಿದ್ರು ಸಹ ಕೇಂದ್ರ ಸ್ಥಾನ ಬಿಟ್ಟು ಹೋಗಿರೋದಕ್ಕೆ ಅವರನ್ನು ಅಮಾನತ್ತು ಮಾಡಲು ಇಲಾಖೆಯಲ್ಲಿ ತೀರ್ಮಾನವಾಗ್ತಿದೆ.ಇನ್ಸ್ಪೆಕ್ಟರ್ ನ ಈ ಕೆಲಸದಿಂದ ಇಡೀ ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವಂತೆ ಮಾಡಿರೋದಂತೂ ಸುಳಲ್ಲ.
ವರದಿ: ರವಿ ಕುಮಾರ್, ಕೋಲಾರ.
PublicNext
23/08/2022 09:30 am