ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂಬುಲೆನ್ಸ್, ಫೈರ್ ಬ್ರಿಗೇಡ್, ಪೊಲೀಸ್ ವಾಹನಗಳಿಗೇ ಇನ್ಸೂರೆನ್ಸ್ ಇಲ್ಲ..ಮುಂದೇನು ಗತಿ?

ಅಥಣಿ : ವಿಮೆ ಇಲ್ಲದೆ ವಾಹನ ಓಡಿಸುವುದು ಕಾನೂನು ಬಾಹಿರ. ಆದ್ರೆ ಅಂಬ್ಯೂಲೆನ್ಸ, ಅಗ್ನಿಶಾಮಕ ದಳದಂತಹ ತುರ್ತು ಬಳಕೆ ವಾಹನಗಳು ವಿಮೇ ಇಲ್ಲದೆ ಓಡಾಡುತ್ತಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಅದು ಬಿಡಿ ಪೊಲೀಸ್ ಇಲಾಖೆಗೇ ಸೇರಿದ ನೂರಕ್ಕೂ ಹೆಚ್ಚು ವಾಹನಗಳಿಗೆ ವಿಮೆ ಇಲ್ಲವಂತೆ.

ಅಪಘಾತ ಸಮಯದಲ್ಲಿ ಗಾಯಾಳುಗಳನ್ನು ಬದುಕಿಸಲು ಅಥವಾ ಬೆಂಕಿ ಅವಘಡ ಸಂಭವಿಸಿದಾಗ ನಂದಿಸಲು ಆದ್ರೆ ಅಂಬ್ಯೂಲೆನ್ಸ, ಅಗ್ನಿಶಾಮಕ ವಾಹನಗಳು ಅತಿ ವೇಗದಲ್ಲಿ ಸಂಚರಿಸಬೇಕಾಗುತ್ತೆ. ಈ ಸಂದರ್ಭಗಳಲ್ಲಿ ಏನಾದರೂ ಅನಾಹುತವಾದರೆ ಅದಕ್ಕೆ ಯಾರು ಹೊಣೆ?

ಅಥಣಿಯ ಆರೋಗ್ಯ ಇಲಾಖೆಯ 2 ಅಂಬುಲೆನ್ಸ್, ಪೋಲಿಸ್ ಇಲಾಖೆಯ ಒಂದು 112 ವಾಹನ ಹಾಗೂ ಅಗ್ನಿಶಾಮಕ ಇಲಾಖೆಯ 2 ವಾಹನಗಳಿಗೆ ವಿಮೆ ಇಲ್ಲದೆ ಇರುವುದು ಸಾರ್ವಜನಿಕ ಆಘಾತವುಂಟು ಮಾಡಿದೆ.

ಅಥಣಿ ಆರ್.ಟಿ.ಓ ಕಛೇರಿಯಲ್ಲಿ ಲಭ್ಯವಾದ ಮಾಹಿತಿ ಆಧಾರದ ಮೇಲೆ ಅಲ್ಲಲ್ಲಿ ಅಪಘಾತವಾದಾಗ ಅಥವಾ ಆರೋಗ್ಯ ಸಮಸ್ಯೆಗಳಾದಾಗ ಬಹುವೇಗವಾಗಿ ಕ್ರಮಿಸುವ 02 ಅಂಬುಲೆನ್ಸಗಳ ಇನ್ಸೂರೆನ್ಸ್ ಮುಗಿದು ವರ್ಷಗಳು ಉರುಳಿದರೂ ಅದನ್ನು ರಿನೆವೆಲ್ ಮಾಡದೆ ಇರುವುದು ನೋಡಿದರೆ ಸಾಮಾನ್ಯರ ಜೀವ ಉಳಿಸುವ ಅಂಬುಲೆನ್ಸ್ ಸಿಬ್ಬಂದಿಗಳ ಜೀವಕ್ಕೆ ಬೆಲೆಯೇ ಇಲ್ಲವೇ ಎಂಬ ಪ್ರಶ್ನೆ ಉದ್ಭವವಾಗುತ್ತಿದೆ.

ತಾಲೂಕಿನಲ್ಲಿ ಏನಾದರೂ ಅವಘಡಗಳು ಜರುಗಿದಾಗ ಸಾಮಾನ್ಯವಾಗಿ 100 ಅಂಕಿಗೆ ಫೋನ್ ಮಾಡಿದಾಗ ಈ ಇಲಾಖೆಗಳಿಗೆ ಮಾಹಿತಿ ರವಾನೆ ಆಗುತ್ತದೆ ಅಂತಹ ಇಲಾಖೆಯ ವಾಹನಗಳ ಪರಿಸ್ಥಿತಿ ಇದು.

ಇನ್ನು ಅಗ್ನಿ ಅವಘಡಗಳಾದರೆ ಶೀಘ್ರ ಧಾವಿಸುವ ಅಗ್ನಿಶಾಮಕ ದಳದ 1 ಜಲವಾಹನ ಹಾಗೂ 1 ಬುಲೆಟ್ ವಾಹನಕ್ಕೂ ಕೂಡ ಇನ್ಸೂರೆನ್ಸ್ ಮುಗಿದಿರುವುದು ಅಚ್ಚರಿಯ ಸಂಗತಿ.

ತಾಲೂಕಿನಾದ್ಯಂತ ಸಣ್ಣಪುಟ್ಟ ತೊಂದರೆಗಳ ಸ್ಥಳಕ್ಕೆ ತೆರಳುವ ಹಾಗೂ ಅಲ್ಲಲ್ಲಿ ಸಾರ್ವಜನಿಕರ ವಾಹನ ನಿಲ್ಲಿಸಿ ಅವರ ದಾಖಲಾತಿ ಪರಿಶೀಲಿಸುತ್ತಿರುವ ಪೋಲಿಸ್ ಇಲಾಖೆಯ 112 ವಾಹನಕ್ಕೂ ಕೂಡ ಇನ್ಸೂರೆನ್ಸ್ ಕೂಡ ಮುಗಿದು 4 ವರ್ಷವಾಗಿದೆ, ಇವರದೇ ಇನ್ಸೂರೆನ್ಸ್ ಇಲ್ಲದಿರುವಾಗ ಸಾರ್ವಜನಿಕರ ವಾಹನ ಹೇಗೆ ತಪಾಸಣೆ ಮಾಡುತ್ತಾರೆ ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಈ ಕೂಡಲೇ ಈ ಜೀವರಕ್ಷಕರ ವಾಹನಗಳಿಗೆ ಸಂಬಂಧಪಟ್ಟ ಇಲಾಖೆಗಳು ವಾಹನ ವಿಮೆ ಮಾಡಿಸಿ ಅವರಿಗೂ ರಕ್ಷಣೆ ಕೊಡಲಿ ಹಾಗೂ ಸಾರ್ವಜನಿಕರು ಬೊಟ್ಟು ಮಾಡುವುದನ್ನ ತಪ್ಪಿಸಿಕೊಳ್ಳಲಿ ಎಂಬುದು ಪಬ್ಲಿಕ್ ನೆಕ್ಸ್ ಆಶಯ.

Edited By : Shivu K
PublicNext

PublicNext

22/08/2022 10:12 am

Cinque Terre

87.98 K

Cinque Terre

3