ಕೋಲಾರ: ಕೋಟ್ಯಾಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನು ನುಂಗಲು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಸಹಿಯನ್ನೇ ನಕಲು ಮಾಡಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಫೋರ್ಜರಿ ಮಾಡಿದ್ದ ಇಬ್ಬರು ಕಂಬಿ ಎಣಿಸುತ್ತಿದ್ದಾರೆ.
ಕೋಲಾರ ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗಳೇ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ವಕ್ಕಲೇರಿ ಹೋಬಳಿಯ ರೆವಿನ್ಯು ಇನ್ಸ್ ಪೆಕ್ಟರ್ ಮಂಜುನಾಥ್ ಹಾಗೂ ತಹಶೀಲ್ದಾರ್ ಕಚೇರಿಯ ಕೇಸ್ ವರ್ಕರ್ ಶೈಲಜಾ ಎನ್ನುವ ಇಬ್ಬರನ್ನ ಕೋಲಾರದ ಗಲ್ ಪೇಟೆ ಪೊಲೀಸರು ಬಂದಿಸಿದ್ದು, ಈ ಪೋರ್ಜರಿ ಕೇಸ್‌ನ ಪ್ರಮುಖ ಆರೋಪಿಯಾದ ತಾಲೂಕು ಕಚೇರಿಯ ಶಿರಸ್ತೇದಾರ್ ಶ್ರೀನಿವಾಸ್ ಪರಾರಿಯಾಗಿದ್ದಾರೆ.
ಕೋಲಾರ ತಾಲೂಕಿನ ಆಲಹಳ್ಳಿ ಗ್ರಾಮದ ಕೋಟಿ ಕೋಟಿ ಬೆಲೆ ಬಾಳುವ, ಸರ್ವೆ ಸಂಖ್ಯೆ 127 ರಲ್ಲಿನ 3.27 ಎಕರೆಯ, ಲ್ಯಾಂಡ್ ಲಾಕ್ಡ್ ಲ್ಯಾಂಡ್ ಜಮೀನನ್ನ, ಸನ್ ಲಾಡ್ಜ್ ಪ್ರಾಪರ್ಟಿ ಎನ್ನುವ ರಿಯಲ್ ಎಸ್ಟೇಟ್ ಕಂಪನಿಗೆ, ಸರ್ಕಾರಿ ನಿಗದಿತ ದರದಲ್ಲಿ ಮಾರಾಟ ಮಾಡುವಂತೆ, ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಸಹಿಯುಳ್ಳ ಪತ್ರವಿರುವ ಫೈಲ್ ತಹಶೀಲ್ದಾರ್ ಕಚೇರಿಯಲ್ಲಿ ಪತ್ತೆಯಾಗಿತ್ತು. ಅದೇ ಕಂಪನಿಗೆ ಜಮೀನು ಮಂಜೂರು ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲವೆಂದು ರಾಜ್ಯ ಸರ್ಕಾರ ಹಾಗೂ ಹಿಂದಿನ ಕೋಲಾರ ಜಿಲ್ಲಾಧಿಕಾರಿಯಾದ ಸೆಲ್ವಮಣಿ ಅವರು ಖಾಸಗಿ ಕಂಪನಿ ಅರ್ಜಿ ತಿರಸ್ಕರಿಸಿದ್ದರು. ಆದರೆ ತಹಶೀಲ್ದಾರ್ ಕಚೇರಿಯ ಕೆಲ ಅಧಿಕಾರಿಗಳು, ಈಗಿನ ಡಿಸಿ ವೆಂಕಟ್ ರಾಜಾ ಅವರು ಜಮೀನು ಮಂಜೂರು ಮಾಡುವಂತೆ ಆದೇಶಿಸಿರುವ ಮಾಹಿತಿ ನಕಲಿ ಪತ್ರದಲ್ಲಿದೆ. ಈ ಬಗ್ಗೆ ತಹಶೀಲ್ದಾರ್ ನಾಗರಾಜ್ ಗಲ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬುಧವಾರದಿಂದ ಗಲ್ ಪೇಟೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
PublicNext
01/07/2022 03:36 pm