ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

9.5 ಕೆ.ಜಿ ಚಿನ್ನ, 3 ಕೆ.ಜಿ ಬೆಳ್ಳಿ, 4 ಸೈಟ್, 2 ಕಾರು ಪತ್ತೆ!: ರುದ್ರೇಶಪ್ಪಗೆ ಡಿ.7ರವರೆಗೆ ನ್ಯಾಯಾಂಗ ಬಂಧನ

ಶಿವಮೊಗ್ಗ: ಎಸಿಬಿ ದಾಳಿಗೆ ಒಳಗಾಗಿದ್ದ ಗದಗ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್‌.ರುದ್ರೇಶಪ್ಪ ಅವರನ್ನು ಡಿಸೆಂಬರ್​ 7ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಅಕ್ರಮ ಆಸ್ತಿಗಳಿಕೆ ಸಂಬಂಧಪಟ್ಟಂತೆ ನಿನ್ನೆ (ಗುರುವಾರ) ರುದ್ರೇಶಪ್ಪ ಅವರ ಗದಗ ಜಿಲ್ಲೆಯ ಬಾಡಿಗೆ ಮನೆ ಹಾಗೂ ಕಚೇರಿ‌ ಸೇರಿದಂತೆ ಶಿವಮೊಗ್ಗದ ಎರಡು ಮನೆಗಳ ಮೇಲೆ ದಾಳಿ ನಡೆಸಲಾಗಿತ್ತು. ಈ ದಾಳಿಯ ವೇಳೆ ರುದ್ರೇಶಪ್ಪನವರ ಬಳಿ 9.4 ಕೆ.ಜಿ. ಚಿನ್ನಾಭರಣ ಹಾಗೂ ಚಿನ್ನದ ಬಿಸ್ಕತ್, 3 ಕೆ.ಜಿ. ಬೆಳ್ಳಿ, 4 ನಿವೇಶನಗಳು, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ತಣಿಗೆರೆಯಲ್ಲಿ 8 ಎಕರೆ ಕೃಷಿ ಭೂಮಿ, 15.94 ಲಕ್ಷ ರೂ. ನಗದು, 20 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು, 2 ಕಾರು ಹಾಗೂ 3 ದ್ವಿಚಕ್ರ ವಾಹನಗಳು ಇರುವುದನ್ನು ಎಸಿಬಿ ಅಧಿಕಾರಿಗಳು ಪಟ್ಟಿ ಮಾಡಿದ್ದರು.

ನಗರದ ಎಸ್‌ಬಿಐ ಬ್ಯಾಂಕ್‌ಗೆ ಶುಕ್ರವಾರ ರುದ್ರೇಶಪ್ಪ ಅವರನ್ನು ಕರೆತಂದ ಅಧಿಕಾರಿಗಳು ಲಾಕರ್‌ಗಳನ್ನು ಪರಿಶೀಲಿಸಿದರು. ಆದರೆ, ಲಾಕರ್‌ನಲ್ಲಿ ಯಾವುದೇ ಹಣ, ಒಡವೆ, ದಾಖಲೆಗಳು ಇರಲಿಲ್ಲ. ಇನ್ನೂ ಹೆಚ್ಚಿನ ವಿಚಾರಣೆಗೆ ಅವಕಾಶ ಕಲ್ಪಿಸಬೇಕೆಂದು ವಿನಂತಿಯ ಮೇರೆಗೆ ನ್ಯಾಯಾಧೀಶರು ಡಿಸೆಂಬರ್ 7ರ ತನಕ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

Edited By : Vijay Kumar
PublicNext

PublicNext

26/11/2021 07:29 am

Cinque Terre

42.95 K

Cinque Terre

7