ಬೆಳಗಾವಿ: ಕರ್ನಾಟಕ ಲೋಕಸೇವಾ ಆಯೋಗದ ಎಫ್‌ಡಿಎ ಪರೀಕ್ಷೆ ಪ್ರಶ್ನೆ ಪತ್ರಿಕೆ ಪ್ರಕರಣದ ಸಂಬಂಧ ಮತ್ತೋರ್ವ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಶಿವಲಿಂಗ ಪಾಟೀಲ್ ಬಂಧಿತ ಆರೋಪಿ. ಶಿವಲಿಂಗ ಬೆಳಗಾವಿಯಲ್ಲಿ ಕೋಚಿಂಗ್ ಸೆಂಟರ್ ನಡೆಸುತ್ತಿದ್ದ. ಆದರೆ ಒಂದು ವರ್ಷದ ಹಿಂದೆ ಕಾರಣಾಂತರದಿಂದ ಕೋಚಿಂಗ್ ಸೆಂಟರ್ ಮುಚ್ಚಿತ್ತ ಎಂದು ಬೆಂಗಳೂರು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಎಫ್‌ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಈವರೆಗೂ 25 ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪೈಕಿ 7 ಆರೋಪಿಗಳು ಸರ್ಕಾರಿ ಉದ್ಯೋಗಿಗಳು ಎಂಬ ಮಾಹಿತಿ ಲಭಿಸಿದೆ.
PublicNext
17/02/2021 08:04 am